Hassan: ಅರಸಿಕೆರೆ ತಾಲೂಕಿನ ದುಮ್ಮೆನಹಳ್ಳಿಯ ಗ್ರಾಮ ಪಂಚಾಯಿತಿಯ ಅಮ್ಮನ ಹಟ್ಟಿಯ ಶ್ರೀ ಗಂಗಮಾಳಮ್ಮ ದೇವಿ ದೇವಸ್ಥಾನದ ಜಾತ್ರೆಯ ವಿಚಾರವಾಗಿ ಸ್ಥಳೀಯ ಶಾಸಕರಾದ ಶಿವಲಿಂಗೇಗೌಡರ ವಿರುದ್ಧ ಎನ್ ಆರ್ ಸಂತೋಷ್ ಹಾಗೂ ಬೆಂಬಲಿಗರಿಂದ ಆಕ್ರೋಶ ವ್ಯಕ್ತಪಡಿಸಿದರು.
ದೇವಸ್ಥಾನದ ಹುಂಡಿ ವಿಚಾರದ ಬಗ್ಗೆ ಗಲಾಟೆಗಳು ಆಗಿದ್ದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗುವ ವಿಚಾರಗಳಲ್ಲಿ ಪೊಲೀಸ್ ಇಲಾಖೆಗೆ ಹಾಗೂ ಎನ್ ಆರ್ ಸಂತೋಷ್ ಹಾಗೂ ಅವರ ಬೆಂಬಲಿಗರಿಗೆ ಮಾತಿನ ಚಕಾಮುಕಿ ನಡೆದಿದ್ದು ಏನ್ ಆರ್ ಸಂತೋಷ್ ಹಾಗೂ ಅವರ ಬೆಂಬಲಿಗರಿಂದ ಪಿಪಿ ವೃತ್ತದಲ್ಲಿ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಏನ್ ಆರ್ ಸಂತೋಷ ರವರು ಮಾತನಾಡಿ ಬ್ರಿಟಿಷ್ ಆಡಳಿತ ನಡೆಯುತ್ತಿದೆಯಾ..? ಪ್ರತಿಭಟನೆ ಮಾಡಲು ಅವಕಾಶ ಇಲ್ಲವೆ? ಎಂದು ಹೇಳುವ ಮೂಲಕ ಪೊಲೀಸ್ ಅಧಿಕಾರಿಯ ನನ್ನನ್ನು ಕೆಟ್ಟು ಮಾತೊಂದ ಬೈದಿದ್ದು ಹಾಗೂ ಶಿವಲಿಂಗೇಗೌಡರ ಅಮ್ಮನಟ್ಟಿ ದೇವಸ್ಥಾನದ ಜಾತ್ರೆ ನಡಿಯಬಾರದೆಂದು ನಡೆಸುತ್ತಿರುವ ಹುನ್ನಾರಕ್ಕೆ ನಾವು ಬಿಡುವುದಿಲ್ಲ. ನಾವು ಜಾತ್ರೆ ಮಾಡುತ್ತೇವೆ ಎಂದಿದ್ದಾರೆ..
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಅಜ್ಜಪ್ಪ ನವರು ಶಿವಲಿಂಗೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು..




