Dharwad: ಜೈಲಿನಲ್ಲಿರುವ ಖೈದಿಗಳಿಗೆ ರಾಜಾತಿಥ್ಯ, ಮನೆಗಿಂತ ಇಲ್ಲೇ ಆರಾಮವಾಗಿದ್ದೇವೆ ಎಂದ ಕಿಡಿಗೇಡಿ

Dharwad News: ಧಾರವಾಡ: ಧಾರವಾಡದ ಕಾಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಪೋಕ್ಸೋ ಕಾಯ್ದೆಯಡಿ ಸೆರೆವಾಸ ಅನುಭವಿಸುತ್ತಿದ್ದ ಖೈದಿ ಫರ್ವೇಜ್ ಈಗ ಹೈ ಫೈ ಜೀವನ ನಡೆಸುತ್ತಿದ್ದಾನೆ. ಜೈಲಿನಲ್ಲಿ ಇದ್ದೇ ಅಪ್ರಾಪ್ತ ಬಾಲಕಿ ಜತೆ ಫೋನ್ ಕರೆಯಲ್ಲಿ ಸಂಭಾಷಣೆ ನಡೆಸಿರುವ ಆರೋಪ ಕೇಳಿಬಂದಿದೆ.

ಶಾಕಿಂಗ್ ಆಡಿಯೋ ವೈರಲ್ ಆಗಿದ್ದು, ಖೈದಿ ಅಪ್ರಾಪ್ತ ಬಾಲಕಿಗೆ ಜೈಲಿನಲ್ಲಿ ದುಡ್ಡು ಕೊಟ್ಟರೆ ಎಲ್ಲವೂ ಸಿಗತ್ತೆ ಎಂದು ಹೇಳಿದ್ದಾನೆ. ಪೋಲೀಸರಿಗೆ ಹಣ ನೀಡಿದ್ರೆ ಸಿಗರೇಟ್, ಸರಾಯಿ, ಮೊಬೈಲ್ ಎಲ್ಲವೂ ಸಿಗುತ್ತವೆ ಎಂದು ಖೈದಿ ಹೇಳಿದ್ದಾನೆ.

ಆಕೆ, ನೇಹಾ ಹಿರೇಮಠ ಹತ್ಯೆ ಆರೋಪಿ ಇರುವ ಸೆಲ್‌ ನಲ್ಲಿದ್ದಿಯಾ ಅಂತಾ ಬಾಲಕಿ ಪ್ರಶ್ನೆ ಕೇಳಿದ್ದು, ಎಲ್ಲರೂ ಒಂದೇ ಸೆಲ್ ನಲ್ಲೇ ಇದ್ದೇವೆ ಎಂದಿದ್ದಾನೆ. ಜೈಲಿನಲ್ಲಿ ಸ್ಟ್ರಿಕ್ಟ್ ಇರುತ್ತೆ, ಹೊಡೀತಾರೆ ಅಂತಾರಲ್ಲ ಎಂದು ಯುವತಿ ಕೇಳಿದಾಗ, 300 ರೂಪಾಯಿ ಕೊಟ್ಟರೇ 10 ಇಂಟಿಮೆಂಟ್ ಸಿಗರೇಟ್, ಟೈಮ್ ಗೆ ಸರಿಯಾಗಿ ನಾಷ್ಟಾ, ಊಟ ಸಿಗುತ್ತದೆ. ಜೈಲಿನೊಳಗೆ ಕ್ಯಾಂಟೀನ್ ಇದೆ ಎಲ್ಲವೂ ಹಾಯಾಗಿದ್ದೇವೆಂದು ಎಂದು ಖೈದಿ ನಕ್ಕಿದ್ದಾನೆ. ಮನೆಯಲ್ಲಿ ಇರುವುದಕ್ಕಿಂತಲೂ ಇಲ್ಲಿಯೇ ಆರಾಮವಾಗಿದ್ದೇವೆ ಎಂದ ಫರ್ವೇಜ್, ನಾನು ಆಚೆ ಬಂದ ಮೇಲೆ ನನ್ನ ಪರವಾಗಿ ಸಾಕ್ಷಿ ಹೇಳಬೇಕು ಎಂದು ಧಮ್ಕಿಯೂ ಹಾಗಿದ್ದಾನೆ.

ಈ ರೀತಿಯಾಗಿ ಕಾಲ್, ವೀಡಿಯೋ ಕಾಲ್ ಎಲ್ಲ ಮಾಡಿ, ಜೈಲಿನಲ್ಲಿ ಆರಾಮವಾಗಿದ್ದೇವೆ ಎನ್ನುವ ಖೈದಿಯ ಡಿಯೋ ವೈರಲ್ ಆಗಿದ್ದು, ಕಾರಾಗೃದದ ಸಿಬ್ಬಂದಿ ವಿರುದ್ಧ ಜನ ಆಕ್ರೋಶ ್ಯಕ್ತಪಡಿಸಿದ್ದಾರೆ.

About The Author