Web Story: ನೀವು ಯಾವ್ದಾದ್ರೂ ಹೊಟೇಲ್ನಲ್ಲಿ ಉಳಿದಾಗ ಅಲ್ಲಿ ಕೆಟಲ್ ಇಟ್ಟಿರ್ತಾರೆ. ಅದರಲ್ಲಿ ನೀವು ಬಿಸಿ ನೀರು, ಸೂಪ್, ಏನ್ ಬೇಕಾದ್ರೂ ಮಾಡ್ಕೋಬಹುದು ಅಂತಾ ಅದನ್ನ ಇಟ್ಟಿರ್ತಾರೆ. ಆದರೆ ಯಾವುದೇ ಕಾರಣಕ್ಕೂ ಇದನ್ನ ಬಳಸಬಾರದು ಅಂತಾ ಕೆಲವರು ಹೇಳ್ತಾರೆ.
ಅದಕ್ಕೆ ಕಾರಣಾನೂ ಇದೆ. ಅದೇನ್ ಕಾರಣಾ ಅಂದ್ರೆ, ಕೆಲವರು ಆ ಕೆಟಲ್ನಲ್ಲಿ ಸೂಪ್ ಮಾಡ್ಕೋತಾರೆ, ನೀರು ಬಿಸಿ ಮಾಡಿ, ಹಾಲು ಬಿಸಿ ಮಾಡಿ, ಚಹಾ, ಕಾಫಿ ಮಾಡ್ಕೋತಾರೆ. ಇದೆಲ್ಲಾ ಓಕೆ.. ಆದರೆ ಕೆಲವರು ಈ ಕೆಟಲ್ ಬಳಸಿ, ಪಿರಿಯಡ್ಸ್ ಕಪ್, ಅಂಡರ್ ವಿಯರ್ ವಾಶ್ ಮಾಡುವವರೂ ಇದ್ದಾರಂತೆ. ಅಲ್ಲದೇ, ವಾಶ್ರೂಮ್ಗೆ ತೆಕೋಂಡ್ ಹೋಗಿ, ಅಲ್ಲೂ ಯ್ಯೂಸ್ ಮಾಡ್ತಾರಂತೆ.
ರೂಮ್ ಮತ್ತು ರೂಮ್ನಲ್ಲಿ ಇರುವ ವಸ್ತುಗಳನ್ನು ಅಲ್ಲಿನ ಸಿಬ್ಬಂದಿಗಳು ಕ್ಲೀನ್ ಮಾಡ್ತಾರೆ. ಆದರೆ ಕೆಟಲ್ ಎಷ್ಟೇ ಕ್ಲೀನ್ ಮಾಡಿದ್ರೂ, ಅದರಲ್ಲಿ ಕ್ರಿಮಿ ಕೀಟ ಇದ್ದೇ ಇರುತ್ತದೆ. ಹಾಗಾಗಿ ನೀರನ್ನು ಬಿಸಿ ಮಾಡುವ ಬಾಟಲಿಗಳನ್ನ ನೀವೇ ಖರೀದಸಿ, ಬಳಸುವುದು ಉತ್ತಮ. ಈ ಬಾಟಲ್ ಟ್ರಾವೆಲ್ ಫ್ರೆಂಡ್ಲಿಯಾಗಿರೋದ್ರಿಂದಾ, ಎಲ್ಲಿ ಬೇಕಾದ್ರೂ ತೆಗೆದುಕ“ಂಡು ಹೋಗಬಹುದು.




