ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಯುಗಾದಿ ಹಬ್ಬದ ಸಂದರ್ಭ ವಿಶೇಷ ಕಾರ್ಯಕ್ರಮ ನಡೆಯಿತು. ಶಾಲೆಯಲ್ಲಿ ವಾಸ್ತವ್ಯ ಹೂಡಿ ಅಭ್ಯಾಸ ಮಾಡುತ್ತಿರುವ SSLC ವಿದ್ಯಾರ್ಥಿಗಳಿಗೆ ಗ್ರಾಮಸ್ಥರು ಹಾಗೂ SDMC ವತಿಯಿಂದ ಹಬ್ಬಕ್ಕೆ ಒಬ್ಬಟ್ಟು ಊಟವನ್ನು ಏರ್ಪಡಿಸಿದರು.
SSLC ಪರೀಕ್ಷೆಯ ಹಿನ್ನೆಲೆ, ವಿದ್ಯಾರ್ಥಿಗಳು ಶಾಲೆಯಲ್ಲೇ ಉಳಿದುಕೊಂಡು ಓದುತ್ತಿದ್ದು, ಯುಗಾದಿ ಹಬ್ಬದ ದಿನವೂ ಮನೆಗೆ ತೆರಳದೆ ಅಭ್ಯಾಸ ಮುಂದುವರಿಸಿದ್ದಾರೆ. ಹಬ್ಬದ ಸಂತಸವನ್ನು ಕಳೆದುಕೊಳ್ಳಬಾರದೆಂದು SDMC ವತಿಯಿಂದ ಮಧ್ಯಾಹ್ನ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿದೆ.
ಕಳೆದ ಒಂದು ದಶಕದಿಂದ ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸದೇ ಶಾಲೆಯಲ್ಲೇ ಕಲಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಈ ಕ್ರಮದಿಂದ ಶಾಲೆ ಪ್ರತಿವರ್ಷ ಉತ್ತಮ ಫಲಿತಾಂಶ ಸಾಧಿಸುತ್ತಿದ್ದು, ಗ್ರಾಮಸ್ಥರ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.




