Koppala News: ಕೊಪ್ಪಳ: ಕೊಪ್ಪಳದಲ್ಲಿ ನೀರು ಮತ್ತು ಚರಂಡಿ ಸ್ವಚ್ಛತೆಗಾಗಿ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಕೊಪ್ಪಳದ 15ನೇ ವಾರ್ಡ್ ಸರದಾರ ಗಲ್ಲಿಯಲ್ಲಿ ಚರಂಡಿ ಗಬ್ಬು ನಾರುತ್ತಿದ್ದು, ವಾರ್ಡ್ ಮೆಂಬರ್ಗಳು ಸ್ವಚ್ಛತೆ ಬಗ್ಗೆ ಗಮನ ಹರಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದ ಮುಖ್ಯ ರಸ್ತೆ ತಡೆದು ಮಹಿಳೆಯರು ಪ್ರತಿಭಟನೆ ನಡೆಸಿದ್ದು, ಚರಂಡಿ ಬ್ಲಾಕ್ ಆಗಿ, ಮನೆಯ ಮುಂದೆ ಗಬ್ಬು ನಾರುತ್ತಿದೆ. ಮೆಂಬರ್ ಬಳಿ ಮಾತನಾಡಿದರೆ, ಸರಿಯಾಗಿ ಸ್ಪಂದಿಸುವುದಿಲ್ಲ, ನಿರ್ಲಕ್ಷ್ಯಿಸುತ್ತಾರೆ. ಮೂರ್ನಾಲ್ಕು ದಿನಕ್ಕೆ ಒಮ್ಮೆ ಮಾತ್ರ ನೀರು ಬಂದರೆ, ನಾವು ಜೀವನ ಮಾಡೋದಾದ್ರೂ ಹೇಗೆ ಅಂತಾ ಮಹಿಳೆಯರು ಪ್ರಶ್ನಿಸಿದ್ದಾರೆ.
ಸೊಳ್ಳೆಗಳು ಹೆಚ್ಚಾಗಿ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ. 10ಕ್ಕೂ ಹೆಚ್ಚು ಬಾರಿ ನಾವು ಈ ಬಗ್ಗೆ ಮನವಿ ನೀಡಿದ್ರೂ, ಕೊಪ್ಪಳದ ನಗರಸಭೆ ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲವೆಂದು ಮಹಿಳೆಯರು ಆರೋಪಿಸಿದ್ದಾರೆ.




