Davanagere News: ಖಾದರ್ ಆದಿಲ್ ಪಾಷಾ ಅವರ ತಂದೆ ಗಜಮ್ ಫಿರ ಅಲಿ ಕಾಂಗ್ರೆಸ್ ಪಕ್ಷದ ದೀರ್ಘಕಾಲದ ಕಾರ್ಯಕರ್ತರಾಗಿದ್ದು, ಶಾಮನೂರು ಶಿವಶಂಕರಪ್ಪನವರ ಚಿರಪರಿಚಿತರು ಈ ಬಾರಿ ಉಪಚುನಾವಣೆಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು.
ಆದ್ರೆ ಪಕ್ಷ ಕುಟುಂಬದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದು, ಇದರಿಂದ ಅಸಮಾಧಾನಗೊಂಡ ಅವರ ಮಗನಿಗೆ ಅಲ್ಪಸಂಖ್ಯಾತರ (ಮುಸ್ಲಿಂ) ಮತಗಳನ್ನು ಗಮನಿಸಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಇದೀಗ ಅವರ ಮನವೊಲಿಸಲು ಭದ್ರಾವತಿ ಕಾಂಗ್ರೆಸ್ ಶಾಸಕರು ಬಿಕೆ ಸಂಗಮೇಶ ಅವರು ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ದಾವಣಗೆರೆಯ ಸ್ವತಂತ್ರ ಅಭ್ಯರ್ಥಿ ನಿವಾಸದಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎನ್ನಲಾಗಿದೆ.




