ಪ್ರಧಾನಿ ವಿರುದ್ಧ ವಾಟಾಳ್ ನಾಗರಾಜ್ ಈಡುಗಾಯಿ ಪ್ರತಿಭಟನೆ: ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನಕ್ಕಾಗಿ ಆಗ್ರಹ

Mandya News: ಮಂಡ್ಯದಲ್ಲಿ ವಾಟಾಳ್ ನಾಗರಾಜ್ ಈಡುಗಾಯಿ ಚಳುವಳಿ ನಡೆಸಿದ್ದು, ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಪ್ರತಿಭಟನೆಗೆ ಕಾರಣವೇನೆಂದರೆ, ದೇಶದಲ್ಲಿ ಸಿಲೆಂಡರ್ ಸಮಸ್ಯೆ ಉಂಟಾಗಿದ್ದು, ಅಗತ್ಯ ಕ್ರಮ ಕೈಗ“ಳ್ಳುವಂತೆ ಆಗ್ರಹಿಸಿ, ಪ್ರತಿಭಟನೆ ನಡೆಸಿದರು.

ಮಂಡ್ಯದ ಸಂಜಯ ವೃತ್ತದಲ್ಲಿ ಈಡುಗಾಯಿ ಒಡೆದು ಪ್ರತಿಭಟನೆ ನಡೆಸಿದ್ದು, ಯುದ್ಧ ನಿಲ್ಲಿಸಿ, ಗ್ಯಾಸ್ ಸಿಲಿಂಡರ್ ಕೊಡಿ ಎಂದು ಈಡುಗಾಯಿ ಚಳವಳಿ ಮಾಡಿದರು. ಇರಾನ್-ಇಸ್ರೇಲ್ ಯುದ್ಧದಿಂದ ಸಾಕಷ್ಟು ಅನಾನುಕೂಲ ಉಂಟಾಗಿದೆ. ಕೂಡಲೇ ವಿಶ್ವ ಸಂಸ್ಥೆ ಹಾಗೂ ವಿಶ್ವ ಸಂಸ್ಥೆಯ ಮಾನವ ಹಕ್ಕು ಆಯೋಗ ಮಧ್ಯಪ್ರವೇಶ ಮಾಡಬೇಕು. ಕೂಡಲೇ ಯದ್ಧ ನಿಲ್ಲಿಸಿ, ಗ್ಯಾಸ್ ಸಿಲಿಂಡರ್ ನೀಡುವಂತೆ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಇನ್ನು ನಾಳೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಲಿದ್ದು, ಈ ವೇಳೆ
ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಘೋಷಣೆ ಮಾಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಅವರು, ರಾಷ್ಟ್ರಪತಿಗಳ ಮೂಲಕ ಕೇಂದ್ರ ಸರ್ಕಾರ ಭಾರತರತ್ನ ನೀಡುಬೇಕು. ಹಿಂದಿನಿಂದಲೂ ಕೂಡ ಸಿದ್ದಗಂಗಾ ಶ್ರೀ ಗಳಿಗೆ ಭಾರತರತ್ನ ನೀಡದೆ ವಂಚಿಸುತ್ತಿದೆ. ಸಿದ್ದಗಂಗಾ ಶ್ರೀ ಗಳಿಗೆ ಭಾರತರತ್ನ ನೀಡಲೇ ಬೇಕು. ನಾಳೆ ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ಬರ್ತಿದ್ದಾರೆ. ರಾಷ್ಟ್ರಪತಿ ಅವರು ಅವರ ಸಮಾಧಿಗೆ ಪೂಜೆ ಸಲ್ಲಿಸುತ್ತಾರೆ. ಪ್ರಾಮಾಣಿಕವಾಗಿ ಶ್ರೀ ಗಳಿಗೆ ಭಾರತರತ್ನ ಕೊಡಿಸಿ. ಯಡಿಯೂರಪ್ಪ ಅವರ ಕಾಲದಿಂದಲೂ ಭಾರತರತ್ನ ಕೊಡಕ್ಕಾಗಿಲ್ಲ. ಯಡಿಯೂರಪ್ಪ ಸಿಎಂ ಆಗಿ ಉಪಯೋಗಿಸಿಕೊಂಡರು ಅಷ್ಟೆ ಎಂದು ಅಸಮಾಧಾನ ವ್ಕ್ತಪಡಿಸಿರುವ ವಾಟಾಳ್, ಈ ಬಾರಿ ಪ್ರಧಾನಿಗೆ ಹೇಳಿ ಭಾರತರತ್ನ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

About The Author