Haveri: ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟದ ಬಗ್ಗೆ ಭಾರೀ ನಿರ್ಲಕ್ಷ್ಯ: ತರಕಾರಿಯಲ್ಲಿ ಹುಳು ಪತ್ತೆ..

Haveri News: ಹಾವೇರಿ: ಶಾಲೆಗೆ ಬರುವ ಮಕ್ಕಳು ಆಹಾರ ಸೇವಿಸಲಿ ಎಂದು ಬಿಸಿಯೂಟ ಯೋಜನೆ ಜಾರಿಗೆ ತರಲಾಯಿತು. ಆದರೆ ಕೆಲ ಶಾಲೆಯಲ್ಲಿ ಮಕ್ಕಳಿಗೆ ಆರೋಗ್ಯಕರ ಆಹಾರ ನೀಡುವ ಬದಲು, ಹಾಳಾದ ತರಕಾರಿ ಬಳಸಿ, ಆಹಾರ ಮಾಡಿ ಉಣಬಡಿಸಲಾಗುತ್ತಿದೆ.

ಶಿಗ್ಗಾವಿ ತಾಲೂಕಿನ ಶಡಗರವಳ್ಳಿ ಗ್ರಾಮದಲ್ಲಿರುವ ಸರಕಾರಿ ಶಾಲೆಯ ಮುಖ್ಯ ಶಿಕ್ಷಕರು ಈ ರೀತಿಯ ತಪ್ಪು ಮಾಡಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯೋಪಾಧ್ಯಾಯ ಸುರೇಶ ಭಜಂತ್ರಿ ಅವರಿಂದ ಕೊಳೆತ ತರಕಾರಿ ಖರೀದಿ ಮಾಡಿ, ಬಿಸಿಯೂಟ ತಯಾರಿಸುವವರಿಗೆ ನೀಡಿ, ಅದರಲ್ಲೇ ಅಡುಗೆ ಮಾಡಿ ಹಾಕಿ ಎಂದು ತಾಕೀತು ಮಾಡಿದ್ದಾರೆಂದು ಆರೋಪಿಸಲಾಗಿದೆ.

ಹೀರೆಕಾಯಿ, ಸವತೇಕಾಯಿ, ಟೊಮ್ಯಾಟೊನಲ್ಲಿ ಹುಳ ಪತ್ತೆಯಾಗಿದ್ದು, ತಕ್ಷಣವೇ ಎಚ್ಚತ್ತ ಎಸ್ ಡಿ ಎಂ ಸಿ ಅಧ್ಯಕ್ಷ ಚಂದ್ರು ಪರಿಶೀಲನೆ ನಡೆಸಿದ್ದಾರೆ. ತಪ್ಪು ಕಂಡುಬಂದಾಗ, ಅಧ್ಯಕ್ಷರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಮುಖ್ಯೋಪಾಧ್ಯಾಯರ ವರ್ತನೆ ಬಗ್ಗೆ ಹಿರಿಯ ಅಧಿಕಾರಿಗಳ ಬಳಿ ದೂರು ನೀಡಿದರೂ, ಯಾವ ಕ್ರಮವೂ ಕೈಗ“ಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ.

About The Author