Sirsi News: ಮಗು ರಕ್ಷಿಸಿದ ಪಯ್ಯು ಚೌಟಿ ಸನ್ಮಾನಿಸಿದ WHRRK ಸಂಘಟನೆ

Sirsi: ಡಬ್ಲ್ಯೂ ಎಚ್ ಆರ್ ಆರ್ ಕೆ ಫೌಂಡೇಶನ್ ವಿಶ್ವ ಮಾನವ ಹಕ್ಕುಗಳು ಉತ್ತರ ಕನ್ನಡ ಜಿಲ್ಲಾ ವತಿಯಿಂದ, ಇತ್ತೀಚಿಗೆ ಬಾವಿಗೆ ಬಿದ್ದ ಮಗುವನ್ನು ಬಾವಿಗಿಳಿದು ಸಂರಕ್ಷಣೆ ಮಾಡಿದ್ದ, ಸಾರಿಕಾ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಪಯ್ಯು ಚೌಟಿ ಅವರನ್ನು ಇಂದು ಸನ್ಮಾನಿಸಲಾಯಿತು.

ಪಯ್ಯು ಚೌಟಿಯವರು ಮಾಡುತ್ತಿರುವ ಸಮಾಜ ಸೇವೆಯನ್ನು ಶ್ಲಾಘಿಸಿ ಸಂಸ್ಥೆಯಿoದ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಪಶ್ಚಿಮ ಭಾಗದ ಮಹಿಳಾ ಅಧ್ಯಕ್ಷರು ಮತ್ತು ಉತ್ತರ ಕನ್ನಡ ಜಿಲ್ಲಾ ಕಾನೂನು ಸಲಹೆಗಾರರೂ ಆದ ಅರ್ಚನಾ ಜಯಪ್ರಕಾಶ್ ನಾಯಕ ಮತ್ತು ಜಿಲ್ಲಾ ಅಧ್ಯಕ್ಷ ಮಂಜುನಾಥ್ ಡಿ ನಾಯ್ಕ್,ಶಿರಸಿ- ಸಿದ್ದಾಪುರ ಭಾಗದ ಉಪಾಧ್ಯಕ್ಷ ಜಹೀರ ಶುಂಠಿ ಮತ್ತು ಕಸ್ತೂರಬಾ ನಗರದ ಜಿಲ್ಲಾ ಸದಸ್ಯರು ಮತ್ತು ಸಿ.ಪಿ.ಬಜಾರ್ ನ ಜಿಲ್ಲಾ ಸದಸ್ಯರು ಮತ್ತು ಗೌಡಳ್ಳಿ ಜಿಲ್ಲಾ ಸದಸ್ಯರು ಮತ್ತು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author