Tumakuru News: ತುಮಕೂರು: ತುಮಕೂರಿನಲ್ಲಿಂದು ಮಾಧ್ಯಮಗಳ ಜತೆ ಉಪಚುನಾವಣಾ ವಿಚಾರವಾಗಿ ಮಾತನಾಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ, ಕಾಂಗ್ರೆಸ್ ಗೆ ಅದೃಶ್ಯ ಮತದಾರರಿದ್ದಾರೆ ಎಂದಿದ್ದಾರೆ.
ಈ ಬಗ್ಗೆ ಮಾತು ಮುಂದುವರೆಸಿರುವ ಅವರು, ಬಡವರು, ಯಾವತ್ತು ಕೂಡ ಉಪಕಾರ ಸ್ಮರಣೆ ಇಟ್ಟುಕೊಂಡ ಇವರು. ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ಏನು ಆಶ್ವಾಸನೆ ಕೊಟ್ಟಿದ್ದೋ ಅದನ್ನ ನಾವು ಬಹಳ ಎಫೆಕ್ಟಿವ್ ಆಗಿ ಇಂಪ್ಲಿಮೆಂಟ್ ಕೂಡ ಮಾಡಿದ್ದೇವೆ. ಬೆನಿಫಿಷಿಯರಿಸಿದ್ದಾರೆ ಅವರೆಲ್ಲರೂ ಕೂಡ ಕಾಂಗ್ರೆಸ್ಸಿಗೆ ಆಶೀರ್ವಾದ ಮಾಡ್ತಾರೆ ಅನ್ನೋ ವಿಶ್ವಾಸ ಇದೆ. ಈ ಹಿನ್ನಲೆನಲ್ಲಿ ಎರಡು ಕಡೆನೂ ನಾವು ಗೆಲ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಷ್ಟು ಜನ ಚುನಾವಣೆಗೆ ಸ್ಪರ್ಧಿಸಿದ್ದಾರೆ ಅವರೆಲ್ಲಾರು ಗೆಲ್ತೀವಿ ಅನ್ನೋ ವಿಶ್ವಾಸದಲ್ಲೇ ಸ್ಪರ್ಧಿಸಿದ್ದಾರೆ. ಅವರವರು ಆಶಾದಾಯಕವಾಗಿ ಹೇಳ್ಕೊತಾರೆ, ಹೇಳ್ಕೊಳ್ಳೋದಕ್ಕೆ ನಮಗೇನು ಅಡ್ಡಿ ಇಲ್ಲ. ಜನರ ಮನಸ್ಸಿನಲ್ಲಿ ನಾವಿದ್ದೇವೆ, ಕಾಂಗ್ರೆಸ್ ಪಕ್ಷ ಇದೆ, ಸಿದ್ದರಾಮಯ್ಯನವರು ಇದ್ದಾರೆ. ಸಿದ್ದರಾಮಯ್ಯ ಸರ್ಕಾರ ಕೊಟ್ಟಂತ ಗ್ಯಾರಂಟಿಗಳು ಜನರಿಗೆ ಮುಟ್ಟಿದೆ . ಜನರು ಉಪಕಾರ ಸ್ಮರಣೆಯನ್ನ ಮತ ಹಾಕುವುದರ ಮೂಲಕ ತೋರಿಸುತ್ತಾರೆ ಎಂದು ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಇನ್ನು ಒಳಮೀಸಲಾತಿ ವಿಚಾರದ ಬಗ್ಗೆ ಮಾತನಾಡಿರುವ ರಾಜಣ್ಣ, ಒಳಮೀಸಲಾತಿ ಅದು ಒಂದು ರೀತಿನಲ್ಲಿ ಗೊಂದಲದ ಗೂಡಾಗಿದೆ. ಯಾರೊಬ್ಬರು ಕೂಡ ಅದರಿಂದ ಸಮಾಧಾನ ಪಟ್ಟಂಗೆ ಅನಿಸ್ತಾ ಇಲ್ಲ. ಲೆಫ್ಟ್ ಆಗ್ಲಿ ರೈಟ್ ಆಗ್ಲಿ ಅದರ್ಸ್ ಆಗ್ಲಿ ಇನ್ನೊಬ್ಬರು ಆಗ್ಲಿ ಗೊಂದಲ ಇದೆ. ಅದರಲ್ಲಿ ಇನ್ನೊಂದು ಏನಂದ್ರೆ. ಈ ಅಲೆಮಾರಿಗಳದು ಇದೆಯಲ್ಲ. ಅಲೆಮಾರಿಗಳನ್ನ ನಾಗಮೋಹನ್ ದಾಸ್ ಅವರು ಎಲ್ಲ ಕ್ಯಾಟಗರೈಸ್ ಮಾಡಿ ಒಂದು ಪರ್ಸೆಂಟ್ ಇಟ್ಟಿದ್ರು, ಈಗ ಅದೆಲ್ಲ ತಪ್ಪಿಸಿ ಅವರನ್ನೆಲ್ಲ ಎ ಕ್ಯಾಟಗರಿಗೆ ತಗೊಂಡು ಹೋಗಿ ಇಟ್ಟಿದ್ದಾರೆ. ಆ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದಂತಹ ನಿರ್ಣಯ ಅಂತ ನಾನು ಹೇಳ್ತಿದ್ದೀನಿ ಎಂದು ರಾಜಣ್ಣ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನೆರಡು ವರ್ಷ ನಾನೇ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿರುವ ರಾಜಣ್ಣ, ಅವರು ಅಸೆಂಬ್ಲಿನಲ್ಲಿ ಇನ್ನೆರಡು ಬಜೆಟ್ ಅನ್ನು ಹೈ ಕಮಾಂಡ್ ಒಪ್ಪಿದ್ರೆ ಮಾಡ್ತೀನಿ ಅಂತ ಹೇಳಿದ್ದಾರೆ. ಜನ ನಿರೀಕ್ಷೆ ಮಾಡ್ತಾರೆ. ಆದರೂ ಜನ ನಿರೀಕ್ಷೆ ಮಾಡಿದ್ರು ಕೂಡ ಹೈ ಕಮಾಂಡ್ ನಲ್ಲಿ ಆ ನಿರೀಕ್ಷೆಗೆ ಗೌರವ ಕೊಡ್ತಾರೆ ಅಂತ ನಾನು ಅಂದುಕೊಳ್ಳುತ್ತೇನೆ. ಕೆಲವು ಬಾರಿ ಜನರ ತೀರ್ಮಾನ ಒಂದಿರುತ್ತೆ ಮೇಲ್ಗಡೆಯವರು ರಾಜಕಾರಣಿಗಳು ಮಾಡುವ ತೀರ್ಮಾನ ಒಂದಿರುತ್ತದೆ. ಏನು ಮಾಡೊಕ್ಕೆ ಆಗಲ್ಲ ಅದೇಲ್ಲಾ ದೇಶದ ಇತಿಹಾಸ ಎಂದು ರಾಜಣ್ಣ ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನ ಮಾಡಬೇಕು ಅನ್ನೋದು ಮೊದಲಿಂದಲೂ ನನ್ನ ವಾದ. ಗ್ರಾಮ ಪಂಚಾಯಿತಿ ಇರಲಿ, ಮುನ್ಸಿಪಾಲಿಟಿಗಳು ಇರಲಿ, ಕಾರ್ಪೊರೇಷನ್ ಗಳು ಇರಲಿ, ಜಿಲ್ಲಾ ಪಂಚಾಯಿತಿ ಇರಲಿ, ತಾಲೂಕು ಪಂಚಾಯಿತಿ ಇರಲಿ, ಯಾವತ್ತೂ ಕೂಡ ಜನಪ್ರತಿನಿಧಿಗಳು ಇದ್ದರೆ ಆ ಅಧಿಕಾರ ವಿಕೇಂದ್ರೀಕರಣಕ್ಕೆ ಅರ್ಥ ಬರುತ್ತದೆ.
ಜನಪ್ರತಿನಿಧಿಗಳು ಇಲ್ಲದೆ ಬರಿ ಅಧಿಕಾರಿಗಳ ಕಡೆಯಿಂದ ನಾವು ಸರ್ಕಾರ ನಡೆಸುತ್ತೀವಿ. ಅಧಿಕಾರಿಗಳ ಮೂಲಕ ಸ್ಥಳೀಯ ಸಂಸ್ಥೆಗಳು ನಡೆಸುತ್ತೀವಿ ಅನ್ನೋ ಪ್ರಯತ್ನ ಸರಿಯಾದಂತದ್ದಲ್ಲ. ಸ್ಥಳೀಯ ಸಂಸ್ಥೆಗಳು ಟರ್ಮ್ ಮುಗಿಯುತ್ತೆ ಆ ಕೂಡಲೇ ಅದನ್ನ ಚುನಾವಣೆ ಮಾಡಬೇಕು. ಮೊದಲಿನಿಂದಲ್ಲೂ ಇದು ನನ್ನ ವಾದ ಎಂದು ರಾಜಣ್ಣ ಹೇಳಿದ್ದಾರೆ.
ಕ್ಯಾಬಿನೆಟ್ ಪುನರ್ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ರಾಜಣ್ಣ, ಕ್ಯಾಬಿನೆಟ್ ವಿಸ್ತರಣೆ ಮಾಡಬಹುದು ಮಾಡದೆ ಇರಬಹುದು. ಚುನಾವಣಾ ಫಲಿತಾಂಶಗಳು ಬಂದ ನಂತರ ವಿಸ್ತರಣೆಯಾಗಬಹುದು. ನನಗೆ ಮಂತ್ರಿ ಸ್ಥಾನ ಬಂದ್ರೆ ಬರ್ತದೆ, ಹೋದ್ರೆ ಹೋಗ್ತದೆ ಅದಕ್ಕೆ ನಾವೇನು ಯೋಚನೆ ಮಾಡೋದಿಲ್ಲ. ಏನು ಮಂತ್ರಿ ಇದ್ರೇನೆ ಕೆಲಸ ಮಾಡೋದಾ. ಅದಕ್ಕೋಸ್ಕರನೇ ಹೇಳೋದು ಯಾವಾಗಲೂ ಕೂಡ ಪವರ್ ಇಸ್ ಪಾಯಿಸನ್ ಅಂತ ಒಂದು ಗಾದೆ ಕೇಳಿದ್ದೀನಿ. ಪಾಯಿಸನ್ ಅನ್ನು ಸರಿಯಾಗಿ ಬಳಸಿದರೆ ಔಷಧಿನು ಮಾಡ್ಕೋಬಹುದು. ಈಗ ಕ್ಯಾನ್ಸರ್ ಗೆ ಪಾಯಿಸನ್ ಇಂದಾನೆ ಔಷಧಿ ಮಾಡೋದು. ಹಾಗಾಗಿ ಆ ಪವರ್ ಅನ್ನ ಪಾಯಿಸನ್ ಅದನ್ನ ಬಳಸೋದರ ಮೇಲೆ ಅದರ ಪರಿಣಾಮ, ದುಷ್ಪರಿಣಾಮ, ಸತ್ಪರಿಣಾಮಗಳು ಗೊತ್ತಾಗ್ತವೆ ಎಂದು ರಾಜಣ್ಣ ಹೇಳಿದ್ದಾರೆ.




