ಲವ್ ಟ್ರ್ಯಾಪ್ ಜಿಹಾದ್ ಮಾಡುವವರನ್ನು ಕಂಡಲ್ಲಿ ಗುಂಡಿಕ್ಕಬೇಕು: ಬಸನಗೌಡ ಪಾಟೀಲ್ ಯತ್ನಾಳ್

Political News: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ಮಾತನಾಡಿರುವ ಯತ್ನಾಳ್, ಮುಸ್ಲಿಂ ಯುವಕನೋರ್ವ ಪ್ರೀತಿಯ ನಾಟಕವಾಡಿ ಹಿಂದೂ ಯುವತಿಯ ಮೇಲೆ ಅತ್ಯಾಚಾರವೆಸಗಿರುವುದು ಈ ಕೋಮಿನವರ ಅಸಹನೆ, ದ್ವೇಷ ಹಾಗೂ ಹಿಂದೂಗಳ ವಿರುದ್ಧ ಇರುವ ಭಾವನೆಗಳು ಎಂತದ್ದು ಎಂಬುದಕ್ಕೆ ಹಿಡಿದ ಕೈಗನ್ನಡಿ ಎಂದಿದ್ದಾರೆ.

ಪ್ರತ್ಯೇಕ ಘಟನೆಗಳಲ್ಲಿ ಜಿಮ್‌ ಟ್ರೈನರ್‌ ಸಮೀರ್ ಮುಲ್ಲಾ ಮತ್ತು ಮುಫೀಸ್ ಮಿಯಾನ್ನವರ್ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ. ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ಅವರ ಮೇಲೆ ಪ್ರೀತಿ ಎಂಬ ನಾಟಕವಾಡಿ, ಅತ್ಯಾಚಾರವೆಸಗಿದವರ ಮೇಲೆ ಯಾವುದೇ ಕರುಣೆ ತೋರಿಸದೆ ಕಂಡಲ್ಲಿ ಗುಂಡಿಕ್ಕುವ ಆದೇಶವನ್ನು ಸರ್ಕಾರ ನೀಡಬೇಕು ಯತ್ನಾಳ್ ಆಗ್ರಹಿಸಿದ್ದಾರೆ.

ಈ ಆಗಂತುಕರು ನಡೆಸುವ ಅಂಗಡಿ, ಮುಂಗಟ್ಟು ಗಳ ಪರವಾನಗಿಯನ್ನು ತಕ್ಷಣಕ್ಕೆ ಬರುವಂತೆ ರದ್ದು ಗೊಳಿಸಿ, ಸರ್ಕಾರದಿಂದ ಪಡೆಯುತ್ತಿರುವ ಎಲ್ಲ ರೀತಿಯಾದ ಸೌಲಭ್ಯಗಳನ್ನು ಕೂಡಲೇ ಕಡಿತಗೊಳಿಸಲಿ. ಈ ರೀತಿಯಾದ ಪ್ರಕರಣಗಳನ್ನು ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ (FTSCs) ಮೂಲಕ ಕಾಲಮಿತಿಯಲ್ಲಿ ವಿಚಾರಣೆ ನಡೆಸಿ, ಕೃತ್ಯವೆಸಗಿದವರು ಮತ್ತು ಷಡ್ಯಂತ್ರ ಹೂಡಿದವರನ್ನು ಗಲ್ಲಿಗೇರಿಸಿದರಷ್ಟೇ ಇಂತವರಿಗೆ ಬುದ್ದಿ ಬರುವುದು ಹಾಗೂ ಸಮಾಜಕ್ಕೆ ಸ್ಪಷ್ಟ ಸಂದೇಶ ರವಾನೆಯಾಗುವುದು ಎಂದು ಯತ್ನಾಳ್ ಅಭಿಪ್ರಾಯ ಪಟ್ಟಿದ್ದಾರೆ.

About The Author