Himachala Pradesh: ಪೇರಳೆ ಹಣ್ಣು ಕದ್ದು ತಿಂದಳೆಂಬ ಕಾರಣಕ್ಕೆ ಬಾಲಕಿಯನ್ನು ಕಟ್ಟಿ ಹಾಕಿ ಶಿಕ್ಷೆ ನೀಡಿರುವ ಘಟನೆ ಹಿಮಾಚಲಪ್ರದೇಶದ ಉನಾದಲ್ಲಿ ನಡೆದಿದೆ.
ನಿವೃತ್ತ ಸೇನಾಧಿಕಾರಿ ಇಂಥ ಕೆಲಸ ಮಾಡಿದ್ದು, ಜನ ಇದು ನಾಚಿಕೆಗೇಡಿನ ಕೆಲಸವೆಂದು ಕಿಡಿಕಾರಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ತನ್ನ ಮನೆಯ ಮುಂದಿನ ಪೇರಳೆ ಗಿಡದಲ್ಲಿನ ಹಣ್ಣನ್ನು ಕದ್ದು ತಿಂದಳೆಂಬ ಕಾರಣಕ್ಕೆ, 7ರಿಂದ 8 ವರ್ಷದ ಬಾಲಕಿಯನ್ನು ಮೆಟ್ಟಿಲಿಗೆ ಕಟ್ಟಿ, ಶಿಕ್ಷೆ ನೀಡಲಾಗಿದೆ.
ವೀಡಿಯೋದಲ್ಲಿ ಆಕೆ ಅಳುತ್ತ ತನ್ನನ್ನು ಕಾಪಾಡಿ ಎಂದು ಬೇಡುತ್ತಿದ್ದಾಳೆ. ಈ ವೀಡಿಯೋ ಮಾಡುತ್ತಿದ್ದ ವ್ಯಕ್ತಿ ಹಣ್ಣು ಕದ್ದಳೆಂದು ಹೀಗೆ ಬಡಿಯೋದಾ ಎಂದು ಕೇಳಿದಾಗ, ಮಕ್ಕಳು ಕಳ್ಳತನ ಮಾಡಿದ್ರೆ ಸುಮ್ನಿರ್ಬೇಕಾ..? ಅವಳು ನಮ್ಮ ಮನೆಯ ಪೇರಳೆ ಕದ್ದಿದ್ದಾಳೆಂದು ಆ ನಿವೃತ್ತ ಸೇನಾಧಿಕಾರಿ ಆರೋಪಿಸಿದ್ದಾರೆ.
ಈ ಬಗ್ಗೆ ವೀಡಿಯೋ ಮಾಡಿದ ವ್ಯಕ್ತಿ ದೂರು ದಾಖಲಿಸಿದ್ದು, ವೀಡಿಯೋ ಸಾಕ್ಷಿಯಾಗಿ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ, ವೀಡಿಯೋ ಮಾಡುವವರ ಬಗ್ಗೆಯೂ ಅಧಿಕಾರಿ ಅವಹೇಳನಕಾರಿಯಾಗಿ ಮಾತನಾಡಿದ್ದರು. ಬಳಿಕ ಅವರು ಇಂಥ ತಪ್ಪು ತಿಳಿಯದೇ ಆಗಿದೆ. ಇನ್ನು ಮುಂದೆ ಇಂಥ ತಪ್ಪಾಗುವುದಿಲ್ಲ. ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
"Uncle, please save me." 😥
"Retd. Army man became a monster." 😡
This man tied a baby girl to an iron railing
and beat her MERCILESSLY just because she took a guava from his garden in Una, HP.I'm speechless about the pain she must have felt. This man must be arrested ASAP. pic.twitter.com/TaHZiIl6Rs
— Suraj Kumar Bauddh (@SurajKrBauddh) April 5, 2026
बच्ची के साथ अमरूद तोड़कर खाने वाली बच्ची के साथ मारपीट करने वाला अब वीडियो वायरल होने के बाद यह कुत्ता सामने आकर अपने कृत्य पर माफी भी मांग रहा हैं।
ऊना जिले में बच्ची ने अमरूद तोड़कर खा लिया था इसलिए इस हैवान ने मासूम बच्ची की बेरहमी से पिटाई की।
इस पर तो सख्त से सख्त… pic.twitter.com/jx4YTAAr3U
— Ravindra Jatav (@Ravindra_Jatav9) April 6, 2026




