Uttara Pradesh: ಉತ್ತರಪ್ರದೇಶದ ಮಥುರಾದಲ್ಲಿ ವೃಂದಾವನ ದೇವಸ್ಥಾನವಿದೆ. ದೇಶದ ಪ್ರಸಿದ್ಧ ದೇವಸ್ಥಾನಗಳಲ್ಲಿ ವೃಂದಾವನ ಕೂಡ 1. ಇಲ್ಲಿ ಶ್ರೀ ಕೃಷ್ಣನನ್ನು ಪೂಜಿಸಲಾಗುತ್ತದೆ. ಈ ಸ್ಥಳದಲ್ಲೇ ಕೃಷ್ಣ ತನ್ನ ಬಾಲ್ಯ ಕಳೆದಿದ್ದ ಎನ್ನಲಾಗಿದೆ. ಇದೇ ಸ್ಥಳದಲ್ಲಿ ರಾಧಾ-ಕೃಷ್ಣನಿಗೆ ಸಂಬಂಧಿಸಿದ ಹಲವು ದೇವಸ್ಥಾನಗಳಿದೆ.
ಹಾಗಾಗಿ ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ನೀಡಿ, ಶ್ರೀಕೃಷ್ಣನ ದರ್ಶನ ಮಾಡುತ್ತಾರೆ. ಆದರೆ ಇಂಥ ಪ್ರಸಿದ್ಧ ಸ್ಥಳಗಳಲ್ಲಿ ಭಕ್ತಿಯ ಹೆಸರಲ್ಲಿ ಮೋಸವೂ ನಡೆಯಬಹುದು. ಏಕೆಂದರೆ ಓರ್ವ ಮಹಿಳೆ ಈ ಬಗ್ಗೆ ರಿಲ್ಸ್ ಮಾಡಿದ್ದು, ಅವರಿಗಾದ ಮೋಸದ ಬಗ್ಗೆ ವಿವರಿಸಿದ್ದಾರೆ.
ದೇವಸ್ಥಾನಕ್ಕೆ ಭೇಟಿ ನೀಡುವವರು ಭಕ್ತಿಯಲ್ಲಿ ತಲ್ಲೀನರಾಗಿರುತ್ತಾರೆ. ಅದರಲ್ಲೂ ಬೇರೆ ಬೇರೆ ರಾಜ್ಯದಿಂದ ಬಂದವರಿಗೆ ಆ ಸ್ಥಳದ ಬಗ್ಗೆ ಹೆಚ್ಚು ಮಾಹಿತಿ ಇರುವುದಿಲ್ಲ. ಅಂಥವರು ಸ್ಥಳೀಯರ ಮಾತನ್ನು ನಂಬಿ ಮೋಸ ಹೋಗಬಹುದು.
ಅದೇ ರೀತಿ ಈ ಮಹಿಳೆ ಕೂಡ ಪ್ರಸಾದದ ವಿಷಯದಲ್ಲಿ ಮೋಸ ಹೋಗಿದ್ದಾರೆ. ಗೋವರ್ಧನ ಪರಿಕ್ರಮ ಮಾಡುವಾಗ, ಅಲ್ಲಿ `1 ದೇವಸ್ಥಾನದಲ್ಲಿ ಪಂಡಿತರ“ಬ್ಬರು ಇವರಿಗೆ 1 ಪ್ರಸಾದ ನೀಡಿದ್ದಾರೆ. ಕೇಸರಿ ವಸ್ತ್ರದಲ್ಲಿ ಪ್ರಸಾದವನ್ನು ಸುತ್ತಿ ನೀಡಲಾಗಿತ್ತು. ಆ ಪ್ರಸಾದ ನಿಮ್ಮ ಬಳಿ ಇದ್ದಲ್ಲಿ, ಶ್ರೀಕೃಷ್ಣ ನಿಮ್ಮನ್ನು ರಕ್ಷಿಸಿದಂತೆ, ಆತ ನಿಮ್ಮ ಜತೆ ಇದ್ದಂತೆ ಅಂತಾ ಹೇಳಿದ್ದರಂತೆ.
ಅಲ್ಲದೇ ಇದನ್ನು ಕಪಾಟಿನಲ್ಲಿರಿಸಿದರೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಅಂತಲೂ ಹೇಳಿದ್ದರಂತೆ. ಆ ಪ್ರಸಾದಕ್ಕಾಗಿ ಅವರು 1,200 ರೂಪಾಯಿ ದಕ್ಷಿಣೆಯನ್ನೂ ಕೇಳಿದ್ದರಂತೆ. ಆದರೆ ಇವರು 100 ರೂಪಾಯಿ ನೀಡಿ ಬಂದರಂತೆ.
ಮನೆಗೆ ಬಂದು ಪ್ರಸಾದವೆಂದು ನೀಡಿದ ಆ ಕೇಸರಿ ವಸ್ತ್ರದಲ್ಲಿ ಏನಿದೆ ಎಂದು ನೋಡಿದಾಗ, 1 ರೂಪಾಯಿ ನಾಣ್ಯ ಮತ್ತು 3 ಪೇಪರ್ ಬೌಲ್‌ಗಳನ್ನು ಕಟ್ಟಿ ಇಡಲಾಗಿತ್ತಂತೆ. ಇದನ್ನು ನೋಡಿ ಆ ಮಹಿಳೆ ಶಾಕ್ ಆಗಿದ್ದು, ಯಾರಾದರೂ ವೃಂದಾವನಕ್ಕೆ ಹೋದಾಗ ಜೋಪಾನವಾಗಿರಿ, ಈ ರೀತಿ ಲೂಟಿ ಮಾಡಲು ಕಾಯುತ್ತಿರುತ್ತಾರೆ ಹುಷಾರಾಗಿರಿ ಎಂದಿದ್ದಾರೆ. ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ.




