Koppala: ಮದ್ಯ ಮಾರಾಟ ನಿಷೇಧಿಸಲು ಆಗ್ರಹ : ಅಕ್ರಮವಾಗಿ ಮದ್ಯ ಮಾರಿದರೆ ಕಠಿಣ ಕ್ರಮ: ಚಂದ್ರಪ್ಪ ಪಿಎಸ್ಐ

Koppala: ಕುಷ್ಟಗಿ ತಾಲೂಕಿನ ತಾವರಗೇರಾ ಠಾಣಾ ವ್ಯಾಪ್ತಿಗೆ ಬರುವ ಗುಡ್ಡದ ಹನಮಸಾಗರ ಹಾಗೂ ಗುಡ್ಡದ ಹನಮಸಾಗರ ಕ್ಯಾಂಪ್ ನ ಮನೆಗಳಲ್ಲಿ ಹಾಗೂ ಸಣ್ಣ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿರುವ ಆರೋಪ ಕೇಳಿಬಂದಿದೆ.

ಹಳ್ಳಿಗಳಲ್ಲಿ ಜನಜೀವನ ಹದಗೆಟ್ಟಿದೆ ಎಂದು ಆರೋಪಿಸಿ ಗ್ರಾಮಸ್ಥರು ತಾವರಗೇರಾ ಠಾಣಾದ ಚಂದ್ರಪ್ಪ ಪಿ ಎಸ್ ಐ ಯವರಿಗೆ ಮನವಿ ಮಾಡಿದ್ದು, ವಿಷಯ ತಿಳಿದ ಠಾಣಾ ಸಿಬ್ಬಂದಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ, ಮದ್ಯ ಮಾರಾಟ ಮಾಡುವ ಅಂಗಡಿ ಮತ್ತು ಮನೆಗಳಿಗೆ ಗ್ರಾಮದ ಮಹಿಳೆಯರ ಹಾಗೂ ಹಿರಿಯರ ಸಮ್ಮುಖದಲ್ಲಿ ಮದ್ಯ ಮಾರಾಟ ಮಾಡುವವರಿಗೆ ಎಚ್ಚರಿಕೆ ಕೂಡ ನೀಡಿದ್ದಾರೆ.

ಯಾವದೇ ಕಾರಣಕ್ಕೂ ಇನ್ನೊಮ್ಮೆ ಆಕ್ರಮವಾಗಿ ಮದ್ಯ ಮಾರಾಟ ಮಾಡುವದು ಕಂಡು ಬಂದರೆ ಕಾನೂನಿನ ಸುವ್ಯವಸ್ಥೆಯಲ್ಲಿ ಕಠಿಣ ಕ್ರಮ ಕೈಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಯಥೇಚ್ಛವಾಗಿ ಎಲ್ಲೆಂದರಲ್ಲಿ ಮದ್ಯ ಮಾರಾಟ ಮಾಡುತ್ತಿದ್ದು, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವವರಿಗೆ ಯಾವುದೇ ರೀತಿಯ ಕಾನೂನಿನ ಭಯ ಇಲ್ಲದಂತಾಗಿದೆ.

ಮಧ್ಯ ಮುಕ್ತ ಗ್ರಾಮವನ್ನಾಗಿಸಲು “ಮಧ್ಯ ಮುಕ್ತ -ಗ್ರಾಮ ಸಶಕ್ತ” ಎಂಬ ಧ್ಯೇಯ ವಾಕ್ಯದೊಂದಿಗೆ ಯುವಕರ ಜೀವನ ಹಾಳಾಗದೀರಲಿ ಎಂದು ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರಾದ ಅಮರೇಶ್ ಡೊಳ್ಳಿನ್ ಹಾಗೂ ಚೌಡಪ್ಪ ಹುನಗುಂದ , ಗ್ರಾಮದ ಗ್ರಾಮಸ್ಥರು ಮಹಿಳೆಯರು ಉಪಸ್ಥಿತರಿದ್ದರು.

ನಮ್ಮ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತ ಮದ್ಯಪಾನ, ಮಾರಾಟದ ಬಗ್ಗೆ ದೂರು ಬಂದರೆ ಪ್ರತಿ ಹಳ್ಳಿಗಳಲ್ಲಿ ಶಾಂತಿ ಕಾಪಾಡಲು ಕಟ್ಟು ನಿಟ್ಟಿನ ಕ್ರಮ ಕೈಗ“ಳ್ಳುವುದಾಗಿ ಚಂದ್ರಪ್ಪ ಪಿ ಎಸ್ ಐ ಎಚ್ಚರಿಕೆ ನೀಡಿದ್ದಾರೆ. ಪ್ರತಿ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕಾಗುತ್ತದೆ. ಜನರ ಸಮಸ್ಯೆಗಳ ಆಲಿಸುವ ನಿಟ್ಟಿನಲ್ಲಿ ಈಗಾಗಲೇ ಕೆಲವು ಹಳ್ಳಿಗಳಲ್ಲಿನ ದೂರಗಳನ್ನು ಪಡೆದು ಕಾನೂನು ಚೌಕಟ್ಟಿನಲ್ಲಿ ಸೂಕ್ತ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

About The Author