Political News: ಕರ್ನಾಟಕ ಟಿವಿ ಜತೆ ಸಚಿವ ಸಂತೋಷ್ ಲಾಡ್ ಮಾತನಾಡಿದ್ದು, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಚುನಾವಣಾ ಪ್ರಚಾರದ ಬಗ್ಗೆ ಮಾತನಾಡಿರುವ ಲಾಡ್, ಎಲ್ಲರಿಗೂ ಜವಾಬ್ದಾರಿ ನೀಡಿದಂತೆ ನನಗೂ ಜವಾಬ್ದಾರಿ ನೀಡಿದ್ದಾರೆ. ಅದೇ ರೀತಿ ನಾನು 3 ದಿನ ಬಾಗಲಕೋಟೆಗೆ ಹೋಗಿ ಅಲ್ಲಿ ಪ್ರಚಾರ ಮಾಡಿ, ಇದೀಗ ದಾವಣಗೆರೆ ಪ್ರಚಾರಕ್ಕೆ ಬಂದಿದ್ದೇನೆ. ಕ್ಯಾಂಪೇನ್ ಮಾಡಿದ್ದೇನೆ ಎಂದಿದ್ದಾರೆ.
ಕಾಂಗ್ರೆಸ್ಸಿಗರು ಟಿಕೇಟ್ ನೀಡದೇ ಅಲ್ಪಸಂಖ್ಯಾತರಿಗೆ ಮೋಸ ಮಾಡಿದ್ದಾರೆಂದು ಬಿಜೆಪಿಗರು ಆರೋಪಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಸಂತೋಷ್ ಲಾಡ್., ಈಗ್ಯಾಕೆ ಬಿಜೆಪಿಯವರಿಗೆ ಅಲ್ಪಸಂಖ್ಯಾತರ ಮೇಲೆ ಅಷ್ಟು ಪ್ರೀತಿ ಬರುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಭಾರತ ದೇಶದ ಪಾರ್ಲಿಮೆಂಟ್‌ನಲ್ಲಿ ಎಷ್ಟು ಜನ ಅಲ್ಪಸಂಖ್ಯಾತರಿದ್ದಾರೆ ಎಂದು ಪ್ರಶ್ನಿಸಿದ ಲಾಡ್, ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿಗರು ಮಾತನಾಡಲು ಶುರು ಮಾಡಿರೋದು ನಮಗೆ ಖುಷಿನೇ. ಆದ್ರೆ ಅವರೆಷ್ಟು ಮುಸ್ಲಿಂಮರಿಗೆ ಪಾರ್ಲಿಮೆಂಟ್‌ನಲ್ಲಿ ಟಿಕೇಟ್ ನೀಡಿದ್ದಾರೆಂದು ಲಾಡ್ ಪ್ರಶ್ನಿಸಿದ್ದಾರೆ.
ಇನ್ನು ಪ್ರತಾಪ್ ಸಿಂಹ ಸಿದ್ದರಾಮಯ್ಯ ಅವರನ್ನು ಹಂಗಾಮಿ ಸಿಎಂ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಲಾಡ್, ಕೇಂದ್ರದಲ್ಲಿ ಎಫ್‌ಸ್ಟಿನ್ ಫೈಲ್ ರಿಲೀಸ್ ಆದ ಮೇಲೆ ಮೋದಿ ಸಾಹೇಬ್ರ ಹಂಗಾಮಿ ಪಿಎಂ ಆಗಿಯೇ ಇದ್ದಾರೆ ಎಂದು ಟಾಂಗ್ ನೀಡಿದ್ದಾರೆ.




