ಅಧಿಕಾರ ಹೋಗಿ ಎಷ್ಟು ವರ್ಷ ಆಗಿದೆ ಆದ್ರೂ ಗೌರವ ಸಲ್ಲಿಸಿದ್ದು ನನ್ನ ಭಾಗ್ಯ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

Mandya News: ಮಂಡ್ಯದ ಎಲೆಚಾಕನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೆರೆ ತುಂಬಿಸುವ ಯೋಜನೆ ಬಗ್ಗೆ ಭಾಷಣ ಮಾಡಿದ್ದಾರೆ.

ಕೆರೆ ತುಂಬಿಸುವ ಯೋಜನೆ ಸಂಪೂರ್ಣ ಆಗಿದೆ. ಇಷ್ಟು ವರ್ಷ ಕಳೆದ ಮೇಲೆ ಲೋಕಾರ್ಪಣೆ ಆಗಿದೆ.
ಸಾರ್ವಜನಿಕ ಜೀವನಕ್ಕೆ ಯಾರು ಅಮಂತ್ರಣ ಕೊಟ್ಟಿಲ್ಲ. ನಾವಾಗೇ ಬಂದಿರುತ್ತೇವೆ ಸಚಿವ ಸ್ಥಾನದ ಅವಕಾಶ ಸಿಕ್ಕಿರುತ್ತೆ. ಒಬ್ಬ ಮಂತ್ರಿ ಆಗಿ ಕೆಲಸ ಮಾಡುವುದು ನಮ್ಮ ಜವಾಬ್ದಾರಿ. ರಾಜಕಾರಣ ಮಾಡೋದಕ್ಕೆ ಎರಡೂ ತರ ಇರುತ್ತೆ. ಅಧಿಕಾರದ ರಾಜಕಾರಣ, ಜನರ ರಾಜಕಾರಣ. ಜನರ ಜೊತೆ ಇದ್ದು ಜನರಿಂದ ನಾಯಕ ಆಗೋದು ಬಹಳ ಮುಖ್ಯ.

ಪವರ್ ಪಾಲಿಟಿಕ್ಸ್ ಮಾಡಿದ್ರೆ. ಅಧಿಕಾರದ ಮದ ಹೋಗಬಾರದು ಅಂದ್ರೆ ಜನರ ಜೊತೆ ಇದ್ದು ಕೆಲಸ ಮಾಡಿ.
KRS ಡ್ಯಾಂ ನಿಂದ ನೀರು ಹೋಗಿರುವ ಬಗ್ಗೆ ಪರಿಶೀಲನೆ ಮಾಡಿದೆ. ಆ ಸಂದರ್ಭದಲ್ಲಿ ಗೇಟ್ ಕಿತ್ತು ಗೋಣಿ ಚೀಲ ಹಾಕಿದ್ರು. KRS ಡ್ಯಾಂ ಮುಟ್ಟಾದಾಗೆ ಕೆಲವು ಮಾತು ಬಂದವು. ಒಂದು ನಿರ್ಧಾರ ಕೈಗೊಂಡು KRS ಡ್ಯಾಂ ಗೇಟ್ ಸರಿಪಡಿಸಲಾಗಿದೆ. ಡ್ಯಾಂ ನಿಂದ ಇವತ್ತಿಗೂ ಕೂಡ ಒಂದು ಹನಿ ನೀರು ಹೊರಗೆ ಹೋಗಲ್ಲ. ನಮ್ಮ ನೀರು ನಮ್ಮ ಹಕ್ಕು.97 ಸಾವಿರ ಎಕರೆ ನೀರಾವರಿ ಇರೋದು ಮಹರಾಜ ಅಣೆಕಟ್ಟಿನಿಂದ. 13 ಮಹರಾಜ ಕಟ್ಟಿದ ನಾಲೆಗಳ ಅಭಿವೃದ್ಧಿ ಪಡಿಸಿ ಉಳಿಸಲಾಗಿದೆ ಎಂದು ಅವರು ಹೇಳಿದರು.

ಇನ್ನು ತಾವು ಡಾಕ್ಟರೇಟ್ ತಿರಸ್ಕರಿಸಿದ ಬಗ್ಗೆ ಮಾತನಾಡಿದ ಮಾಜಿ ಸಿಎಂ, ಗೌರವ ಡಾಕ್ಟರೇಟ್ ಸಾಧನೆ ಮಾಡಿರುವರಿಗೆ ಕೊಡಬೇಕು. ಇತ್ತೀಚೆಗೆ ಅಧಿಕಾರ ಇರುವವರನ್ನ ಆಕರ್ಷಣೆ ಮಾಡಲು ಡಾಕ್ಟರೇಟ್ ಕೊಡ್ತಾರೆ.
ನಾನು ಡಾಕ್ಟರೇಟ್ ಬೇಡ ಎಂದು ನಿರಾಕರಿಸಿದವನು. ಜನರು ಗುರ್ತಿಸಿ ಕೊಡುವ ಡಾಕ್ಟರೇಟ್ ಮಾತ್ರ ಸಾಕು.
ಡಾಕ್ಟರೇಟ್ ಗೌರವಕ್ಕಿಂತ ಹೆಚ್ಚಿನ ಗೌರವ ನೀವು ಕೊಟ್ಟಿದ್ದಿರಿ. ಅಷ್ಟೇ ನನಗೆ ಸಾಕು ಯಾವ ಡಾಕ್ಟರೇಟ್ ಗೌರವ ಬೇಡ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಲಕ್ಷಾಂತರ ರೈತರ ಬೆವರಿನ ಹನಿ ಇದೆ. ಈ ಶಕ್ತಿ ಯಾವತ್ತು ಕುಂದಬಾರದು ಆಗೆ ಇರಬೇಕು. ನಾರಿಮನ್ ಅವರ ಹತ್ತಿರ ನಿರ್ದೇಶನ ಪಡೆದು ಡ್ಯಾಂ ಅಭಿವೃದ್ಧಿ ಕಾರ್ಯ. ಜನರಿಗೆ ಒಳ್ಳೆಯದು ಮಾಡಬೇಕು ಅಂದ್ರೆ ಯಾವ ತಡೆ ಬರಲ್ಲ. ಅಧಿಕಾರಿಗಳ ಮಾತು ಕೇಳಿದ್ರೆ ಯಾವುದೇ ಕಾರಣಕ್ಕೆ ರಾಜ್ಯ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳ ಬಿಟ್ಟು ಕೆಲಸ ಮಾಡಿ. ಜನರ ಪರವಾಗಿ ನಾವೆಲ್ಲರೂ ಕೆಲಸ ಮಾಡೋಣ. ಈ ರೀತಿಯ ಯೋಜನೆಗಳನ್ನು ಸಾಕಷ್ಟು ಮಾಡಿದ್ದೇವೆ. ಅಧಿಕಾರ ಹೋಗಿ ಎಷ್ಟು ವರ್ಷ ಆಗಿದೆ ಆದ್ರೂ ನನಗೆ ಗೌರವ ಸಮರ್ಪಣೆ ಮಾಡಿದ್ದಾರೆ. ಇದು ನನ್ನ ಪುಣ್ಯ ಭಾಗ್ಯ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

About The Author