Dharwad News: ಧಾರವಾಡದಲ್ಲಿ ಫಿಟ್ನೆಸ್ ಫಸ್ಟ್ ಜಿಮ್ ತರಬೇತುದಾರ ಸಾಬೀರ್ ಬಂಧನ

Dharwad News: ಧಾರವಾಡ: ಧಾರವಾಡದಲ್ಲಿ ಫಿಟ್ನೆಸ್ ಫಸ್ಟ್ ಜಿಮ್ ತರಬೇತುದಾರ ಸಾಬೀರ್ ಬಂಧನವಾಗಿದ್ದು, ಅವಳಿ ನಗರ ಪೊಲೀಸ್ ಆಯುಕ್ತ ಎನ್.ಶಶೀಕುಮಾರ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

ಮೇ.30 ರಂದು ದೂರು ದಾಖಲಾಗಿತ್ತು.ದೂರು ಪಡೆದ ನಮ್ಮ‌ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಸಾಬೀರ್ ನನ್ನು ನ್ಯಾಯಾಧೀಶ ಮುಂದೆ ಹಾಜರುಪಡಿಸಲಾಗಿದೆ ಎಂದು ಶಶಿಕುಮಾರ್ ಹೇಳಿದ್ದಾರೆ.

ನಾಳೆ ಉದ್ಯೋಗಾಕಾಂಕ್ಷಿಗಳ ಹೋರಾಟ ಅನುಮತಿಗೆ ನಿರಾಕರಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಶಶಿಕುಮಾರ್, ಅನಿರ್ಧಿಷ್ಟವಾಧಿ ಧರಣಿಗೆ ಮುಂದಾಗಿದ್ದ AKSA ಸಂಘಟನೆಗೆ ಅನುಮತಿ ನಿರಾಕರಿಸಲಾಗಿದೆ. ಧಾರವಾಡ ಡಿಸಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿಗೆ ಅನುಮತಿ ಕೇಳಿದ್ದರು.  AKSA ಸಂಘಟನೆ ನಾಳೆ ಅನಿರ್ದಿಷ್ಟಾವಧಿ ಧರಣಿ ನಡೆಸಲು ಮುಂದಾಗಿತ್ತು. ಆದರೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಅನುಮತಿ‌ ನಿರಾಕರಿಸಿದ್ದಾರೆ ಎಂದು ಶಶಿಕುಮಾರ್ ತಿಳಿಸಿದ್ದಾರೆ..

ಅನುಮತಿ ಇಲ್ಲದಿದ್ದರೂ ಪ್ರತಿಭಟನೆ ಮಾಡಿದರೆ, ಅಗತ್ಯ ಕ್ರಮ ಕೈಗ“ಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.  ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ನಾಳೆ ಹೋರಾಟಕ್ಕೆ ಭಾಗಿಯಾಗದಂತೆ ಮನವಿ ಮಾಡಲಾಗಿದ್ದು,  ಮುಂಜಾಗ್ರತಾ ಕ್ರಮವಾಗಿ ಡಿಸಿ ಕಚೇರಿ ಎದುರು ಅಗತ್ಯ ಭದ್ರತೆ ವಹಿಸಲಾಗುತ್ತದೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.

About The Author