Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಆರ್‌ಎಸ್‌ಎಸ್ ಕುರಿತು ವಿರೋಧಿ ಹೇಳಿಕೆ ನೀಡಿದ್ದು, ಈ ಬಗ್ಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ನೀವು ನಮಾಜ್ ಮಾಡುವ ವೇಳೆ ನಿಮ್ಮ ಎದುರು ವಿಷಕಾರಿ ಸರ್ಪ ಬಂದರೆ, ನೀವು ನಮಾಜ್ ನಿಲ್ಲಿಸಿ, ಆ ವಿಷಕಾರಿ ಸರ್ಪವನ್ನು ಹತ್ಯೆ ಮಾಡಬೇಕು ಎಂದು ಕುರಾನ್‌ನಲ್ಲಿ ಬರೆದಿದೆ. ಅದೇ ರೀತಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕೂಡ ವಿಷಕಾರಿ ಸರ್ಪವಿದ್ದಂತೆ. ನೀವು ನಮಾಜ್ ನಿಲ್ಲಿಸಿಯಾದ್ರೂ ಸರಿ, ಈ ವಿಷಸರ್ಪವನ್ನು ಮುಗಿಸಲೇಬೇಕಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅತ್ಯಂತ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ವಿರುದ್ಧ ಧರ್ಮವನ್ನು ಬಳಸಿ ಜನರನ್ನು ಪ್ರಚೋದಿಸುತ್ತಿರುವುದು ಅತ್ಯಂತ ಆಘಾತಕಾರಿ. ಮತಗಳಿಗಾಗಿ ಸಮಾಜವನ್ನು ಒಡೆಯುವ ಇಂತಹ ಅಪಾಯಕಾರಿ ಪ್ರಯತ್ನಗಳು ಕಾಂಗ್ರೆಸ್ ಹಿಂದಿನಿಂದಲೂ ನಡೆಸುತ್ತಲೇ ಇದೆ ಎಂದು ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ.
ಓಲೈಕೆ ಮತ್ತು ವಿಭಜನೆಯೇ ಕಾಂಗ್ರೆಸ್ ಪಕ್ಷದ ಅಸಲಿ ಮುಖ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಧಿಕಾರದ ಹಪಾಹಪಿಯಿಂದ ದೇಶದ ಏಕತೆಯನ್ನು ಬಲಿಕೊಡಲು ಕೂಡ ಕಾಂಗ್ರೆಸ್ ಸಿದ್ಧವಾಗಿದೆ. ಆಡಳಿತದಲ್ಲಿ ತೋರಿಸಲು ಯಾವುದೇ ಸಾಧನೆಗಳಿಲ್ಲದ ಕಾರಣ, ಸಮಾಜದ ಶಾಂತಿ ಕದಡುವ ಮತ್ತು ಜನರನ್ನು ಪ್ರಚೋದಿಸುವಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ತನ್ನ ಹಳೆಯ ವಿಭಜಕ ತಂತ್ರಗಳಿಗೆ ಶರಣಾಗಿದೆ ಎಂದು ಬಿಜೆಪಿ ವಾಗ್ದಾಳಿ ನೀಡಿದೆ.
ಇನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕುರಿತು ಪ್ರಚೋದನಾಕಾರಿ ಭಾಷಣ ಮಾಡಿದ್ದನ್ನು ಖಂಡಿಸಿ. ರಾಷ್ಟ್ರೀಯ ಏಕತೆ ಮತ್ತು ಸಮುದಾಯಗಳ ನಡುವಿನ ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಇಂದು ಬಿಜೆಪಿ ನಿಯೋಗವು ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದೆ.
ನಿಯೋಗದಲ್ಲಿ ಶಾಸಕರಾದ ಶ್ರೀ ಎಸ್. ಮುನಿರಾಜು, ಶ್ರೀ ಸಿ. ಕೆ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ಎಸ್. ಹರೀಶ್, ರಾಜ್ಯ ವಕ್ತಾರರಾದ ಶ್ರೀ ಪ್ರಕಾಶ್ ಎಸ್. ಮತ್ತು ಪ್ರಮುಖರು ಉಪಸ್ಥಿತರಿದ್ದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕುರಿತು ಪ್ರಚೋದನಾಕಾರಿ ಭಾಷಣ ಮಾಡಿದ್ದನ್ನು ಖಂಡಿಸಿ. ರಾಷ್ಟ್ರೀಯ ಏಕತೆ ಮತ್ತು ಸಮುದಾಯಗಳ ನಡುವಿನ ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಇಂದು… pic.twitter.com/JtzI9ihhya
— BJP Karnataka (@BJP4Karnataka) April 7, 2026
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅತ್ಯಂತ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ವಿರುದ್ಧ ಧರ್ಮವನ್ನು ಬಳಸಿ ಜನರನ್ನು ಪ್ರಚೋದಿಸುತ್ತಿರುವುದು ಅತ್ಯಂತ ಆಘಾತಕಾರಿ. ಮತಗಳಿಗಾಗಿ ಸಮಾಜವನ್ನು ಒಡೆಯುವ ಇಂತಹ ಅಪಾಯಕಾರಿ ಪ್ರಯತ್ನಗಳು ಕಾಂಗ್ರೆಸ್ ಹಿಂದಿನಿಂದಲೂ ನಡೆಸುತ್ತಲೇ ಇದೆ.
ಓಲೈಕೆ… pic.twitter.com/CTUjpybRYu— BJP Karnataka (@BJP4Karnataka) April 7, 2026




