Beauty Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Beauty Tips: ವಯಸ್ಸು 30 ದಾಟಿದ್ರೆ ಸಾಕು. ಸುಸ್ತು ಅನ್ನೋದು ನಮ್ಮ ಜೀವನದ ಭಾಗವಾಗಿ ಬಿಡತ್ತೆ. ಎದ್ದರೆ ಕೂರೋಕ್ಕಾಗದ ಪರಿಸ್ಥಿತಿ. ಕೂತರೆ ಏಳೋಕ್ಕಾಗದ ಪರಿಸ್ಥಿತಿ. ಆದರೆ ಹಳೆಯ ಕಾಲದಲ್ಲಿ ವಯಸ್ಸು 50 ದಾಟುವ ತನಕವಾದ್ರೂ ಗಟ್ಟಿಮುಟ್ಟಾಗಿರ್ತಿದ್ರು. ಆದರೆ ಈಗ 30ಕ್ಕೆ ಜನ ವೀಕ್ ಆಗುತ್ತಿದ್ದಾರೆ. ಹಾಗಾಗಿ ನಾವಿಂದು ನೀವು ಯಾವ ಕೆಲಸ ಮಾಡಿದ್ರೆ, ನಿಮ್ಮ ಕೈ, ಕಾಲು, ಮಂಡಿ ನೋವು, ಮೂಳೆ ನೋವೆಲ್ಲ ಹೋಗುತ್ತದೆ. ಸುಸ್ತಾಗದಂತೆ ಇರೋಕ್ಕೆ ನೀವೇನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..

ನಮಗೆ ಸುಸ್ತಾಗಬಾರದು. ನಾವು ಆರೋಗ್ಯವಾಗಿರಬೇಕು ಅಂದ್ರೆ, ನಮ್ಮ ಜೀರ್ಣ ವ್ಯವಸ್ಥೆ ಸರಿಯಾಗಿರಬೇಕು. ಅದು ಸರಿಯಾಗಿರಬೇಕು ಅಂದ್ರೆ, ನಾವು ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಚೆನ್ನಾಗಿ ನೀರು ಕುಡಿಯಬೇಕು. ಕೂತಲ್ಲೇ ಕೂರದೇ ಯೋಗ, ವ್ಯಾಯಾಮ, ವಾಕಿಂಗ್ ಎಲ್ಲವನ್ನೂ ಮಾಡಬೇಕು. ಇದ್ಯಾವುದೂ ಆಗದಿದ್ದಲ್ಲಿ, ಚೆನ್ನಾಗಿ ಮನೆಗೆಲಸವಾದ್ರೂ ಮಾಡಬೇಕು.

ಇದರ ಜತೆಗೆ, ರಾತ್ರಿ ಮಲಗುವಾಗ ನಾಭಿಗೆ ಸ್ವಲ್ಪ ಎಣ್ಣೆ ಹಾಕಿ, 5 ನಿಮಿಷ ನಾಭಿ ಸುತ್ತಲೂ ನಿಧಾನವಾಗಿ ಮಸಾಜ್ ಮಾಡಬೇಕು. ನಂತರ ನಾಭಿಗೆ ಎಣ್ಣೆಯಲ್ಲಿ ಅದಿದ್ದ ಹತ್ತಿ ಇರಿಸಿ, ಗಮ್ ಟೇಪ್‌ನಿಂದ ಅಂಟಿಸಿ, ಮಲಗಬೇಕು. ಇದರಿಂದ ನಿಮ್ಮ ದೇಹ ರಿಫ್ರೆಶ್ ಆಗುತ್ತದೆ. ಸುಸ್ತೆಲ್ಲ ಹೋಗುತ್ತದೆ. ನಾಭಿಯಿಂದ ದೇಹ ಸೇರಿದ ಎಣ್ಣೆ, ನಿಮ್ಮ ಕೈ ಕಾಲು ನೋವು, ಮೂಳೆ ನೋವು, ಸುಸ್ತು ಇತ್ಯಾದಿಯನ್ನು ಹೋಗಲಾಡಿಸುತ್ತದೆ. ಇಲ್ಲಿ ನೀವು ತೆಂಗಿನ ಎಣ್ಣೆ ಬಳಸಿದರೆ ಉತ್ತಮ.

ಇನ್ನು ಪಾದಕ್ಕೆ 2 ಪಲಾವ್ ಎಲೆ ಹಾಕಿ, ಅದು ಪಾದಕ್ಕೆ ಅಂಟುವ ರೀತಿ ಸಾಕ್ಸ್ ಹಾಕಿ ನಿದ್ರಿಸಿ. ಇದರಿಂದಲೂ ನಿಮ್ಮ ಕೈ ಕಾಲು ನೋವು, ಗಂಟು ನೋವು ಎಲ್ಲವೂ ಕಡಿಮೆಯಾಗುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ ಆಹಾರ ಸೇವಿಸದೇ, ಬಿಸಿ ನೀರಿಗೆ ತುಪ್ಪ ಸೇರಿಸಿ, ಸೇವನೆ ಮಾಡುವುದರಿಂದಲೂ ಮೂಳೆ ಗಟ್ಟಿಯಾಗುತ್ತದೆ.

About The Author