Bollywood: ದಶಕಗಳ ಕಾಲ ಚಿತ್ರರಂಗ ಆಳಿದ್ದ ಖ್ಯಾತ ಗಾಯಕಿ ಆಶಾ ಭೋಂಸ್ಲೆ ತಮ್ಮ 92 ವಯಸ್ಸಿನಲ್ಲಿ ಅನಾರೋಗ್ಯದಿಂದ ಬಳಸಿ ವಿಧಿವಶರಾಗಿದ್ದಾರೆ.
ಹಲವು ತಿಂಗಳಿನಿಂದ ಹೃದಯದ ಸೋಂಕಿನಿಂದ ಅವರು ಅನಾರೋಗ್ಯಕ್ಕೀಡಾಗಿದ್ದರು. ನಿನ್ನೆ ಅವರಿಗೆ ಉಸಿರಾಡಲು ಸಮಸ್ಯೆ ಉಂಟಾಗಿ, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಆಶಾ ಭೋಂಸ್ಲೆ ನಿಧನರಾಗಿದ್ದಾರೆ.
ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರ ಸಹೋದರಿಯಾಗಿರುವ ಆಶಾ ಭೋಂಸ್ಲೆ, ಬಾಲಿವುಡ್ ಸೇರಿ, ಹಲವು ಭಾಷೆಗಳ ಹಾಡಿಗೆ ಧ್ವನಿಯಾಗಿದ್ದರು. 20ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡು ಹಾಡಿದ್ದ ಆಶಾ ಭೋಂಸ್ಲೆ ಇದೀನ ನೆನಪು ಮಾತ್ರ.
ಹಲವು ಫಿಲ್ಮ್‌ಫೇರ್ ಪ್ರಶಸ್ತಿ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತ ಸೇರಿ ಹಲವು ಪ್ರಶಸ್ತಿಗಳಿಗೆ ಆಶಾ ಅವರು ಭಾಜನರಾಗಿದ್ದರು.




