Sandalwood: ಕನ್ನಡದಲ್ಲಿ ಹಿಟ್ ಆಗಿ ಪ್ಯಾನ್ ಇಂಡಿಯಾ ಸಿನಿಮಾ ಆಗಲು ಸಿದ್ಧವಾಗಿರುವ ಪ್ರೇಮದ ಊರಲಿ ಸಿನಿಮಾ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಈ ಸಿನಿಮಾ ನಟಿ ರಮಿಕಾ ಶಿವು ನಮ್ಮ ಚಾನೆಲ್‌ಗೆ ನೀಡಿದ ಸಂದರ್ಶನದ 1 ಝಲಕ್ ನಿಮ್ಮ ಮುಂದೆ.
ರಮಿಕಾ ಸಂದರ್ಶನದಲ್ಲಿ ಮಾತನಾಡಿದ್ದು, ತಮಗೆ ಸಿಕ್ಕ ಪಾತ್ರದಿಂದ ತಾನು ಏನೇನು ಕಲಿತೆ ಎಂದು ವಿವರಿಸಿದ್ದಾರೆ. ಅಲ್ಲದೇ ನಾನು ಸುಮಾರು ಕಡೆ ಇಂಟರ್ವ್ಯೂ ನೀಡಲು ಹೋದಾಗ, ಅಲ್ಲಿ ನನ್ನ ವಾಯ್ಸ್‌ನಿಂದಾನೇ ನಾನು ರಿಜೆಕ್ಟ್ ಆಗಿದ್ದೇನೆ. ಆದರೆ ನೀನಾದೆ ನಾ ಸಿರಿಯಲ್‌ನಿಂದ ನನ್ನ ವಾಯ್ಸ್‌ಗೆ 1 ಬೆಲೆ ಬಂದಿದೆ. ನನ್ನ ವಾಯ್ಸ್‌ನಿಂದಾನೇ ಜನ ನನ್ನನ್ನು ಗುರುತಿಸೋಕ್ಕೆ ಶುರು ಮಾಡಿದ್ದಾರೆ ಎಂದು ರಮಿಕಾ ಹೇಳಿದ್ದಾರೆ.
ಅಲ್ಲದೇ ನನ್ನ ವಾಯ್ಸ್ ಬಗ್ಗೆ ಸೆಲೆಬ್ರಿಟಿಗಳು ಕೂಡ ನನಗೆ ಕಾಲ್ , ಮೆಸೇಜ್ ಮಾಡೋಕ್ಕೆ ಶುರು ಮಾಡಿದ್ರು. ನೀನಾದೆ ನಾ ಸಿರಿಯಲ್ ನನ್ನ ಜೀವನದ ಟರ್ನಿಂಗ್ ಪಾಯಿಂಟ್ ಆಗಿತ್ತು ಅಂತಾ ಹೇಳ್ತಾರೆ ರಮಿಕಾ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ವೀಕ್ಷಿಸಿ.




