Political News: ಚಾಮರಾಜನಗರದ ಗುಂಡ್ಲುಪೇಟೆ ಗಡಿಭಾಗದಲ್ಲಿ ಹಗಲು ದರೋಡೆ ನಡೆಯುತ್ತಿದೆ. ನಮ್ಮ ರಾಜ್ಯದ ಎಂ-ಸ್ಯಾಂಡ್, ಜಲ್ಲಿ ಮತ್ತು ಅಮೂಲ್ಯ ಖನಿಜ ಸಂಪತ್ತು ಪ್ರತಿನಿತ್ಯ 200ಕ್ಕೂ ಹೆಚ್ಚು ಟಿಪ್ಪರ್ಗಳಲ್ಲಿ ಅಕ್ರಮವಾಗಿ ಕೇರಳಂ ರಾಜ್ಯಕ್ಕೆ ಸಾಗಣೆಯಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
- ಸಿಎಂ ಸಿದ್ದರಾಮಯ್ಯ ನವರೇ, ಬಂಡೀಪುರದ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ನಡೆಸಬೇಕಾದ ಅಧಿಕಾರಿಗಳು ಪ್ರತಿ ಲಾರಿಗೆ 300 ರೂ. ‘ವಸೂಲಿ’ ಮಾಡಿಕೊಂಡು ಕಳ್ಳಸಾಗಣೆಗೆ ಸಹಕರಿಸುತ್ತಿರುವ ಅಧಿಕಾರಿಗಳು ಡ್ಯೂಟಿ ಮಾಡುತ್ತಿದ್ದರೋ ಅಥವಾ ನಿಮ್ಮ ಲೂಟಿಗೆ ಸಹಕರಿಸುತ್ತಿದ್ದಾರೋ?
- ಆರ್ಟಿಒ ಮತ್ತು ಪೊಲೀಸ್ ಇಲಾಖೆಯ ಆಶೀರ್ವಾದ ಇಲ್ಲದೆಯೇ ಟಿಪ್ಪರ್ಗಳು ನಿಯಮ ಉಲ್ಲಂಘಿಸಿ ಓವರ್ಲೋಡ್ ತುಂಬಿಕೊಂಡು ಹೋಗಲು ಸಾಧ್ಯವೇ?
- ಈ ವ್ಯವಸ್ಥಿತ ದಂಧೆ ಕೆ.ಸಿ.ವೇಣುಗೋಪಾಲ ಅವರ ಸೂಚನೆಯ ಮೇರೆಗೆ ನಡೆಯುತ್ತಿದೆಯೇ?
- ಈ ಕಳ್ಳ ದಂಧೆಯಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೂ ಪಾಲು ಇದೆಯೇ?
- ಕರ್ನಾಟಕಕ್ಕೆ ಸಿಗಬೇಕಾದ ಸಂಪನ್ಮೂಲಗಳನ್ನ, ರಾಜಧಾನವನ್ನ ನೆರೆ ರಾಜ್ಯಕ್ಕೆ ಧಾರೆ ಎರೆಯಲು ಹೊರಟಿರುವ ನಿಮ್ಮನ್ನ “ಕನ್ನಡ”ರಾಮಯ್ಯ ಎನ್ನಬೇಕೋ ಅಥವಾ “ಕಳ್ಳ”ರಾಮಯ್ಯ ಅನ್ನಬೇಕೋ?‘
ಹೀಗೆ ಆರ್.ಅಶೋಕ್ ಖಾರವಾಗಿಯೇ ಸಿಎಂ ಸಿದ್ದರಾಮಯ್ಯನವರಿಗೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.
ಮುಖ್ಯಮಂತ್ರಿಗಳೇ, ನಿಮ್ಮ ಮೂಗಿನ ನೇರಕ್ಕೇ ಈ ಮಾಫಿಯಾ ನಡೆಯುತ್ತಿದ್ದರೂ ನೀವು ಮೌನವಾಗಿರುವುದು ನೋಡಿದರೆ, ಈ ‘ಕಲೆಕ್ಷನ್’ ಹಣ ಯಾರ ಜೇಬು ಸೇರುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಕನ್ನಡಿಗರ ತೆರಿಗೆ ಹಣ ಮತ್ತು ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯಲು ಬಿಡುವುದಿಲ್ಲ. ತಕ್ಷಣವೇ ಆಕ್ರಮ ಸಾಗಾಣಿಕೆಯನ್ನು ನಿಲ್ಲಿಸಿ, ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.
ಕಮಿಷನ್ ಆಸೆಗೆ ಕರ್ನಾಟಕದ ಗಣಿ ಸಂಪತ್ತನ್ನು ಕೇರಳಂಗೆ ಗುಳುಂ ಮಾಡಲು ಹೊರಟಿದೆ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ!
ಚಾಮರಾಜನಗರದ ಗುಂಡ್ಲುಪೇಟೆ ಗಡಿಭಾಗದಲ್ಲಿ ಹಗಲು ದರೋಡೆ ನಡೆಯುತ್ತಿದೆ. ನಮ್ಮ ರಾಜ್ಯದ ಎಂ-ಸ್ಯಾಂಡ್, ಜಲ್ಲಿ ಮತ್ತು ಅಮೂಲ್ಯ ಖನಿಜ ಸಂಪತ್ತು ಪ್ರತಿನಿತ್ಯ 200ಕ್ಕೂ ಹೆಚ್ಚು ಟಿಪ್ಪರ್ಗಳಲ್ಲಿ ಅಕ್ರಮವಾಗಿ ಕೇರಳಂ ರಾಜ್ಯಕ್ಕೆ… pic.twitter.com/Y4Mr7eH3Th
— R. Ashoka (@RAshokaBJP) April 12, 2026




