Political News: ಮಹಾರಾಷ್ಟ್ರದ ಐಟಿ ಕಂಪನಿಯಲ್ಲಿ ಭಡ್ತಿ ಬೇಕೆಂದಲ್ಲಿ ಗೋಮಾಂಸ ತಿನ್ನಿ ಎಂದು ಹಿಂಸೆ ನೀಡಿರುವುದಾಗಿ ಆರೋಪಿಸಲಾಗಿದೆ.
ನಾಸಿಕ್‌ನ ಐಟಿ ಕಂಪನಿಯಲ್ಲಿ ಈ ಘಟನೆ ನಡೆದಿದ್ದು, ಭಡ್ತಿ ಬೇಕಾದಲ್ಲಿ ಗೋಮಾಂಸ ತಿನ್ನಿ ಎಂದು ಹೇಳಿದ್ದು, ಲೈಂಗಿಕ ಕಿರುಕುಳ ಸೇರಿ ಹಲವು ರೀತಿಯ ಹಿಂಸೆ ನೀಡಿರುವುದಾಗಿ 8 ಮಹಿಳಾ ಉದ್ಯೋಗಿಗಳು ದೂರು ನೀಡಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದು ಆತಂಕ ವ್ಯಕ್ತಪಡಿಸಿರುವ ಸಿ.ಟಿ.ರವಿ, ದೇಶಾದ್ಯಂತ ಲವ್ ಜಿಹಾದ್ ತೀವ್ರ ಸಂಚಲನ ಸೃಷ್ಟಿಸುತ್ತಿದೆ. ಅಮಾಯಕ ಹಿಂದೂ ವಿದ್ಯಾರ್ಥಿನಿಯರನ್ನು ಪ್ರೀತಿಯ ಹೆಸರಿನಲ್ಲಿ ತಲೆ ಕೆಡಿಸಿ, ಅಕ್ರಮವಾಗಿ ಮತಾಂತರ ನಡೆಸುವ ದಂಧೆಯ ಕುರಿತು ನೂರಾರು ದೂರುಗಳು ದಾಖಲಾಗಿವೆ. ಇದೆಲ್ಲದರ ನಡುವೆ, ಅದೇ ಗುಮ್ಮ ಕಾರ್ಪೋರೇಟ್ ಜಿಹಾದ್ ರೂಪದಲ್ಲಿ ನಮ್ಮ ನಡುವೆ ಬಂದಿದೆ! ಎಂದು ರವಿ ಹೇಳಿದ್ದಾರೆ
ಮುಂಬಡ್ತಿ ಬೇಕೆಂದರೆ ಗೋಮಾಂಸ ತಿನ್ನಿ ಎಂದು ಧಮಕಿ ಹಾಕುತ್ತಿರುವ ಬೆಳವಣಿಗೆಗಳು ಪ್ರಸಿದ್ಧ ಐಟಿ ಕಂಪನಿಗಳಲ್ಲಿ ನಡೆಯುತ್ತಿರುವುದು ಅಕ್ಷಮ್ಯ. ತಕ್ಷಣವೇ ಸಂಬಂಧಪಟ್ಟ ಕಂಪನಿಗಳು ಇಂತಹ ಒತ್ತಡ ಹೇರಿದವರನ್ನು ವಜಾಗೊಳಿಸಬೇಕು. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರವಿ ಆಗ್ರಹಿಸಿದ್ದಾರೆ.
ಹೆಣ್ಣು ಮಕ್ಕಳ ಮೇಲೆ ಕಿರುಕುಳ, ಮತಾಂತರಕ್ಕೆ ಯತ್ನ, ಗೋಮಾಂಸ ಸೇವಿಸಲು ಒತ್ತಡ ಹೇರುವ ಘಟನೆಗಳನ್ನು ಹಿಂದೂ ಸಮಾಜ ಸಹಿಸಲು, ಕ್ಷಮಿಸಲು ಸಾಧ್ಯವೇ ಇಲ್ಲ. ಲವ್ ಜಿಹಾದ್ ರೀತಿಯಲ್ಲಿ ‘ಕಾರ್ಪೋರೇಟ್ ಜಿಹಾದ್’ ವಿರುದ್ಧವೂ ಸಂಘಟಿತ ಹೋರಾಟ ರೂಪಿಸುವ ಅಗತ್ಯವಿದೆ ಎಂದು ಸಿ.ಟಿ.ರವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




