Haveri News: ಇದ್ದೂ ಇಲ್ಲದಂತಿದೆ ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಟ್ರೀ ಪಾರ್ಕ್

Haveri News: ಹಾವೇರಿ: ಹಾನಗಲ್ ಪಟ್ಟಣದ ಕೊಗಳತೆಯ ಲ್ಲಿರುವ ಚಿಕ್ಕೇರಿ ಹೊಸಳ್ಳಿ ಮಾರ್ಗದಲ್ಲಿ 20 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ಟ್ರೀ ಪಾರ್ಕ್ ಈಗ ಇದ್ದು ಇಲ್ಲದಂತಾಗಿದೆ.

ನಿರ್ವಹಣಾ ಅನುದಾನ ಕೊರತೆಯಿಂದ ಕಳೆದುಕೊಂಡ ಅರಣ್ಯ ಇಲಾಖೆಯ ನಿರ್ವಹಿಸುತ್ತಿರುವ ಪಟ್ಟಣದ ಶ್ರೀ ಕುಮಾರೇಶ್ವರ ಸಸ್ಯೋದ್ಯಾನ ಹಾನಗಲ್ ಪಟ್ಟಣಕ್ಕೆ ಒಂದು ಉತ್ತಮ ಉದ್ಯಾನವನ ಬೇಕು ಎಂಬ ಆಶಯವನ್ನು ಹೊತ್ತು ಕೋಟಿ ಕೋಟಿ ರು ವೆಚ್ಚದಲ್ಲಿ ನಿರ್ಮಾಣವಾದ ಈ ಟಿ ಪಾರ್ಕ್ ಒಂದೆರಡು ವರ್ಷ ಸಾರ್ವಜನಿಕರು ಅದರಲ್ಲೂ ಮಕ್ಕಳನ್ನು ಬಹುವಾಗಿ ಸೆಳೆದಿತ್ತು.

ಇಲ್ಲಿ ಪ್ರವೇಶ ಪಡೆಯುವವರಿಗಾಗಿ ಮಕ್ಕಳಿಗೆ 5ರೂ ಹಿರಿಯರಿಗೆ 10ರೂ ಶೂಲ್ಕವನ್ನು ವಿಧಿಸಲಾಗಿತ್ತು ಇದರಿಂದ ಲಕ್ಷಾಂತರ ಸಂಗ್ರಹವು ಆಗಿದೆ ಆದರೆ ಕ್ರಮೇಣ ನಿರ್ವಹಣೆಗಾಗಿ ಅನುದಾನವೇ ಲಭ್ಯವಾಗದೆ ಈಗ ಎಲ್ಲಿಂದರಲ್ಲಿ ಕಸ ಬೆಳೆದು ಆಟಿಕೆ ವಸ್ತುಗಳು ನಿರೂಪಯುಕ್ತವಾಗಿದ್ದು ಕುಳಿತುಕೊಳ್ಳುವ ಆಸನಗಳಲ್ಲಿ ಹುತ್ತ ಹುಲ್ಲು ಬೆಳೆದು ನಿಂತಿವೆ.

ಕಬ್ಬಿಣದ ಆಟದ ಸಾಮಗ್ರಿಗಳು ಮುರಿದು ಜಂಗು ಹಿಡಿದು ಎಲ್ಲೆಂದರಲ್ಲಿ ಕಸ ಹರಡಿದೆ ಮುಳ್ಳು ಕಂಠಿಗಳು ಬೆಳೆದಿದೆ ಕಾಡು ಕಾಪಾಡುವ ಶೋಷಣೆ ಉಳ್ಳ ಫಲಗಳು ಬಣ್ಣ ಕಳೆದುಕೊಂಡು ಮುಸುಕಾಗಿವೆ ಪ್ರವೇಶ ದ್ವಾರ ಬಣ್ಣ ಬೇಕೆಂದು ಬಯಸುತ್ತಿದೆ ಇದರ ಗೋಡೆಯ ಮೇಲೆ ಅಳವಡಿಸಲಾದ ಪಕ್ಷಿಗಳ ಚಿತ್ರಗಳು ಜಂಗು ಹಿಡಿದು ಬಣ್ಣವಿಲ್ಲದೆ ಬಣಗುಡುತ್ತಿವೆ.

ವಾಟರ್ ಫಾಲ್ಸ್ ಕೆಲಸ ಮಾಡುತ್ತಿಲ್ಲ ವಾಕಿಂಗ್ ಟ್ರ್ಯಾಕ್ ಇಲ್ಲದಂತಾಗಿದೆ ವಿದ್ಯುತ್ ದೀಪಗಳವಿಲ್ಲ ಸಿಬ್ಬಂದಿ ಸಹ ಇಲ್ಲ ಇಡೀ 20 ಎಕರೆ ಸಸ್ಯೋದ್ಯಾನ ನಿರ್ವಹಣೆಗೆ ಒಬ್ಬನೇ ಒಬ್ಬ ಸಿಬ್ಬಂದಿ ಇದ್ದಾರೆ.

About The Author