Tamilunadu Political News: ಅಭಿಮಾನ ಅನ್ನೋದು ಮಿತಿಯಲ್ಲಿದ್ದರೆ ಉತ್ತಮ. ಆದರೆ ಅದು ಅತೀಯಾದ್ರೆ, ಪ್ರಾಣವೇ ಹೋಗಬಹುದು. ಅಂಥದ್ದೇ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಇಂದು ಪಂಚರಾಜ್ಯ ಚುನಾವಣಾ ಫಲಿತಾಂಶ ಬಂದಿದ್ದು, ತಮಿಳುನಾಡಿನಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷ ಭರ್ಜರಿ ಜಯ ಗಳಿಸಿದ್ದು, ಮ್ಯಾಜಿಕ್ ನಂಬರ್ ದಾಟಿ ಗೆದ್ದಿದೆ. ಹಾಗಾಗಿ ಮುಂದಿನ ಸಿಎಂ ವಿಜಯ್ ಆಗಬಹುದು ಅಂತಲೂ ಹೇಳಲಾಗುತ್ತಿದೆ.
ಆದರೆ ಓರ್ವ ಅಭಿಮಾನಿ ವಿಜಯ್ ಸೋತ ಎಂಬ ಸುಳ್ಳು ಸುದ್ದಿ ಕೇಳಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೃಷ್ಣಗಿರಿ ಎಂಬಲ್ಲಿ ಈ ಘಟನೆ ನಡೆದಿದ್ದು, 28 ವರ್ಷದ ಕೆ.ಮಹೇಂದ್ರನ್ ಎಂಬಾತ ಕತ್ತು ಕುಯ್ದುಕ“ಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ.
ಮತ ಎಣಿಕೆ ಆರಂಭವಾಗುವ ಮುನ್ನವೇ ಹಲವರು ವಿಜಯ್ ಸೋಲುತ್ತಾರೆ ಎಂದು ಹೇಳುತ್ತಿದ್ದರಂತೆ. ಅವರ ಮಾತು ಕೇಳಿ, ತಾಳ್ಮೆಗೆಟ್ಟು ಮಹೇಂದ್ರನ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣವೇ ಅಲ್ಲೇ ಇದ್ದ ಕೆಲವರು ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಸತ್ಯ ಆತನನ್ನು ಐಸಿಯುನಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೋಲೀಸರು ತಿಳಿಸಿದ್ದಾರೆ.




