National News: ಇವತ್ತು ಸಡನ್ ಆಗಿ ರಿಂಗಣಿಸಬಹುದು ನಿಮ್ಮ ಫೋನ್.. ಯಾಕೆ ಗೊತ್ತಾ..?

National News: ಇವತ್ತು ಸಡನ್ ಆಗಿ ನಿಮ್ಮ ಸೆಲ್ ಫೋನ್ ರಿಂಗಣಿಸಬಹುದು. ಕೆಲ ವರ್ಷಗಳ ಹಿಂದೆ ಸಡನ್ ಆಗಿ ಸೈರನ್ ಬಂದಿತ್ತಲ್ಲಾ.. ಅದೇ ರೀತಿ ಇಂದು ಕೂಡ ನಿಮ್ಮ ಸೆಲ್ ಫೋನ್‌ನಲ್ಲಿ ಸೈರನ್ ಸೌಂಡ್ ಕೇಳಬಹುದು ಅನ್ನೋ ಸುದ್ದಿ ಇದೆ.

ಇದು 1 ಪರೀಕ್ಷೆ ಆಗಿದ್ದು, ದೇಶಕ್ಕೆ ಏನಾದರೂ ಅಪಾಯ ಬಂದಾಗ, ಇಡೀ ದೇಶದ ಜನತೆಗೆ ಸರಿಯಾದ ಸಮಯಕ್ಕೆ ಸಂದೇಶ ಕಳುಹಿಸಬೇಕಾಗುತ್ತದೆ. ಅದರ ಪ್ರಯೋಗಕ್ಕಾಗಿ ಈ ರೀತಿ ಸೈರನ್ ಪ್ರಯೋಗ ಮಾಡಲಾಗುತ್ತದೆ.

ಕೇಂದ್ರ ಸರ್ಕಾರ ಜಾರಿ ಮಾಡುತ್ತಿರುವ ನೂತನ ಸುರಕ್ಷಾ ತಂತ್ರಜ್ಞಾನ ಪರೀಕ್ಷಾ ಪ್ರಯೋಗವಾಗಿದೆ. ಭೂಕಂಪ, ಸುನಾಮಿಯಂಥ ವಿಪತ್ತುಗಳಲ್ಲಿ ಜನರನ್ನು ಎಚ್ಚರಿಸುವುದು ಇದರ ಉದ್ದೇಶವಾಗಿದೆ. ಇನ್ನು ನಿಮ್ಮ ಫೋನ್‌ನ್ನು ನೀವು ಯಾವುದೇ ಮೋಡ್ ಅಂದ್ರೆ, ಸೈಲೆಂಟ್, ವೈಬ್ರೇಟ್ ಯಾವುದೇ ಮೋಡ್‌ನಲ್ಲಿ ಇಟ್ಟರೂ ಸೈರನ್ ಬಂದರೆ ಸದ್ದು ಕೇಳೇ ಕೇಳುತ್ತದೆ. ಇದು ಪ್ರಯೋಗಕ್ಕಾಗಿ ಮಾಡುತ್ತಿರುವುದರಿಂದ ಯಾರೂ ಹೆದರುವ ಅವಶ್ಯಕತೆ ಇಲ್ಲವೆಂದು ಸೂಚಿಸಲಾಗಿದೆ.

About The Author