ಸತೀಶ್ ಜಾರಕಿಹೊಳಿ ಸ್ಕೆಚ್ ಸಕ್ಸಸ್! ಉಮೇಶ್ ಮೇಟಿ ಗೆ ದಾಖಲೆ ಜಯ!

ಬಾಗಲಕೋಟೆ ರಣಕಣದಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಿಸಿದೆ. ಸಾಹುಕಾರ್ ಸತೀಶ್ ಜಾರಕಿಹೊಳಿ ಹಾಕಿದ್ದ ಸ್ಕೆಚ್ ವರ್ಕೌಟ್ ಆಗಿದೆ. ಮತಗಳಲ್ಲಿ ಉಮೇಶ್ ಮೇಟಿ ಅವರು ವೀರಣ್ಣ ಚರಂತಿಮಠ ಅವರನ್ನು ಧೂಳೀಪಟ ಮಾಡಿದ್ದಾರೆ.

ಮತ ಎಣಿಕೆ ಸಮಯದಲ್ಲಿ ಕೇಂದ್ರದ ಹೊರಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ರು. ಉಮೇಶ್ ಮೇಟಿ ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದ್ರು. ಬಾಗಲಕೋಟೆ ಉಪಚುನಾವಣೆ ಫಲಿತಾಂಶ ಹೊರಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲುವು ಜಯಬೇರಿ ಬಾರಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪಡೆದ ಮತಗಳು-92,856. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪಡೆದ ಮತಗಳು- 72,912. ಮತಗಳ ಅಂತರ- 19,944. ಗೆಲುವಿನ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್​ ಮೇಟಿ ಹೊಸ ದಾಖಲೆ ಬರೆದಿದ್ದಾರೆ.

ಹಿಂದಿನ ಚುನಾವಣೆಗಳಲ್ಲಿ ಬಾಗಲಕೋಟೆ ಕ್ಷೇತದಲ್ಲಿ ಆಭ್ಯರ್ಥಿಗಳು ಪಡೆದಿದ್ದ ಲೀಡ್ ದಾಖಲೆಯನ್ನು ಉಮೇಶ್​​ ಮೇಟಿ ಮುರಿದಿದ್ದು, 2018ರಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ 15,934 ಮತಗಳ ಅಂತರದ ಗೆಲುವೇ ಕ್ಷೇತ್ರದಲ್ಲಿ ಈವರೆಗಿನ ಅತಿದೊಡ್ಡ ಮತಗಳ ಅಂತರವಾಗಿತ್ತು ಎಂದು ತಿಳಿದು ಬಂದಿದೆ. ಈ ಉಪಚುನಾವಣೆಯ ಜವಾಬ್ದಾರಿಯನ್ನು ಹೊತ್ತಿದ್ದ ಸತೀಶ್ ಜಾರಕಿಹೊಳಿ ಅವರ ಸಂಘಟನಾ ಶಕ್ತಿ ಮತ್ತು ಕಾರ್ಯತಂತ್ರ ಕಾಂಗ್ರೆಸ್ ಕೈ ಹಿಡಿದಿದೆ

About The Author