Doddaballapura: ಪ್ರೀತಿಸಿ ಮದುವೆಯಾದವಳನ್ನೇ ಲಾಡ್ಜ್‌ಗೆ ಕರೆದೋಯ್ದು ಹ*ತ್ಯೆ ಮಾಡಿದ ಪತಿ

Doddaballapura News: ಪ್ರೀತಿಸಿ ವಿವಾಹವಾದ ಪತ್ನಿಯನ್ನು ಲಾಡ್ಜ್‌ಗೆ ಕರೆದೋಯ್ದು ಪತಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ Doddaballapuraದ ಲಾಡ್ಜ್‌ನಲ್ಲಿ ನಡೆದಿದೆ.

ಗೌರಿಬಿದನೂರಿನ 23 ವರ್ಷದ ವಿದ್ಯಾ ಮೃತ ದುರ್ದೈವಿಯಾಗಿದ್ದು, ಆಕೆಯ ಪತಿ ಆನಂದ್ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. 4 ವರ್ಷಗಳ ಹಿಂದೆ ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಓರ್ವ ಮಗನಿದ್ದಾನೆ. ಆದರೆ ಕಳೆದ 6 ತಿಂಗಳಿನಿಂದ ಇಬ್ಬರ ನಡುವಿನ ಸಂಬಂಧ ಸರಿ ಇಲ್ಲದ ಕಾರಣ, ವಿದ್ಯಾ ಪತಿಗೆ ಹೇಳದೇ, ಪಿಜಿಗೆ ಬಂದು ನೆಲೆಸಿದ್ದಳು.

ಬಳಿಕ ಪತಿ ಪತ್ನಿ ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದ್ದ. ಹಾಗಾಗಿ 20 ದಿನಗಳ ಹಿಂದೆ ಪೋಲೀಸರು ಕರೆಸಿ,ಿ ಸಂಧಾನ ನಡೆಸಿ, ಇಬ್ಬರನ್ನೂ ರಾಜಿ ಮಾಡಿ ಕಳುಹಿಸಿದ್ದರು. ಆದರೆ ಬುಧವಾರದಂದು ಪತ್ನಿಯನ್ನು ಲಾಡ್ಜ್‌ಗೆ ಕರೆತಂದ ಪತಿ ಆನಂದ್, ಐಡಿ ಕಾರ್ಡ್‌ ಟ್ಯಾಗ್‌ನಿಂದ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಸ್ಥಳೀಯ ಪೋಲೀಸ್ ಸ್ಟೇಶನ್‌ನಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಯನ್ನು ಪೋಲೀಸರು ಹುಡುಕುತ್ತಿದ್ದಾರೆ. ಆನಂದ್ ಪತ್ತೆಯಾದ ಬಳಿಕ ಹತ್ಯೆಗೆ ಕಾರಣವೇನೆಂದು ತಿಳಿದು ಬರಲಿದೆ.

About The Author