ಒಂದೆಡೆ ಸಮ್ಮರ್ ಹೀಟ್ ಜನರನ್ನು ಸುಡ್ತಿದ್ರೆ, ಮತ್ತೊಂದೆಡೆ ರಾಜ್ಯದ ಹಲವೆಡೆ ಜಲಾಶಯಗಳ ನೀರಿನ ಮಟ್ಟ ಕುಸಿತ ಆತಂಕ ಹುಟ್ಟಿಸಿದೆ. ಆದರೆ ಇದೆಲ್ಲದರ ನಡುವೆ ಮೈಸೂರಿಗರಿಗೆ ಈಗ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಜೂನ್ ಅಂತ್ಯದವರೆಗೂ ಮಳೆ ಬರದೇ ಇದ್ದರೂ ಮೈಸೂರಿನಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗಲ್ಲ. ಅಂತ ವಾಣಿ ವಿಲಾಸ ನೀರು ಸರಬರಾಜು ವಿಭಾಗದ ಅಧಿಕಾರಿಗಳು ಫುಲ್ ಕಾನ್ಫಿಡೆನ್ಸ್ನಿಂದ ಹೇಳಿದ್ದಾರೆ. KRS ಅಲ್ಲಿ ಫುಲ್ ಸ್ಟಾಕ್ ಇದ್ದು ಜೂನ್ ಅಂತ್ಯದ ವರೆಗೂ ನೀರಿನ ಸಮಸ್ಯೆ ಇರುವುದಿಲ್ಲ ಎಂದು ಫುಲ್ ಕಾನ್ಫಿಡೆಂಟ್ ಆಗಿ ಹೇಳಿದ್ದಾರೆ. ಮೈಸೂರು ನಗರದ ಪ್ರಮುಖ ಲೈಫ್ಲೈನ್ ಆಗಿರುವ KRS ಡ್ಯಾಂನಲ್ಲಿ ಈಗ 92.07 ಅಡಿ ನೀರು ಉಳಿದಿದೆ. ಅಂದರೆ ಸುಮಾರು 20.70 TMC ನೀರಿನ ಸ್ಟಾಕ್ ಲಭ್ಯವಿದೆ ಎಂದು ಅಂದಾಜಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಜಲಾಶಯದ ಮಟ್ಟ 70 ಅಡಿ ತಲುಪುವವರೆಗೂ ಮೈಸೂರಿಗೆ ಯಾವುದೇ ಡ್ರಿಂಕಿಂಗ್ ವಾಟರ್ ಕ್ರೈಸಿಸ್ ಎದುರಾಗೋದಿಲ್ಲ. ಅಷ್ಟೇ ಅಲ್ಲದೆ ಕಬಿನಿ ಡ್ಯಾಂನಲ್ಲೂ ಸಾಕಷ್ಟು ನೀರು ಸ್ಟೋರ್ ಆಗಿದ್ದು, ಅಲ್ಲಿ ಕೂಡ ಸಪ್ಲೈಗೆ ಯಾವುದೇ ಪ್ರಾಬ್ಲಂ ಇಲ್ಲ ಅಂತ ಕ್ಲಿಯರ್ ಮಾಡಿದ್ದಾರೆ. ಮೈಸೂರು ನಗರಕ್ಕೆ ಪ್ರತಿದಿನ ಬರೋ ನೀರಿನ ಪ್ರಮಾಣ ಒಟ್ಟು 300 MLD (ಮಿಲಿಯನ್ ಲೀಟರ್ ಪರ್ ಡೇ) ನೀರು ಸಿಟಿಗೆ ಪೂರೈಕೆಯಾಗ್ತಿದೆ.
ಯಾವ ಘಟಕದಿಂದ ಎಷ್ಟು ನೀರು? ಹೊಂಗಳ್ಳಿ ಘಟಕ – 120 MLD, ಮೇಲಾಪುರ ಘಟಕ – 100 MLD, ಕಬಿನಿ ಘಟಕ – 100 MLD, ಬೆಳಗೋಳ ಘಟಕ – 45 MLD ಈ ನೀರು ನಗರದ 65 ವಾರ್ಡ್ಗಳಿಗೆ ಮಾತ್ರ ಅಲ್ಲ… ಹೊಸ ಬಡಾವಣೆಗಳಿಗೂ ರೆಗ್ಯುಲರ್ ಸಪ್ಲೈ ಆಗುತ್ತಿದೆ. ಬೇಸಿಗೆಯಲ್ಲಿ ನೀರಿನ ಬಳಕೆ ಸಾಮಾನ್ಯಕ್ಕಿಂತ 20-30% ಹೆಚ್ಚು ಆಗುತ್ತೆ. ಅವಶ್ಯಕತೆ ಮೀರಿ ನೀರು ವ್ಯರ್ಥ ಮಾಡ್ಬೇಡಿ, ಕಾರ್ ವಾಶ್ಗೆ ನೇರ ಪೈಪ್ ಯೂಸ್ ಮಾಡ್ಬೇಡಿ, ಗಿಡಗಳಿಗೆ ಅತಿಯಾಗಿ ನೀರು ಹರಿಸ್ಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ʼನೋ ವಾಟರ್ ಟೆನ್ಷನ್ʼ. ಎರಡು ಜಲಾಶಯಗಳಲ್ಲಿ ಸಾಕಷ್ಟು ಸ್ಟಾಕ್ ಇದ್ದು ನಾಲ್ಕು ಘಟಕಗಳಿಂದ ಭರ್ಜರಿ ಸಪ್ಲೈ ದೊರೆಯುತ್ತಿದ್ದೆ. ಹೀಗಾಗಿ ಸದ್ಯಕ್ಕೆ ಮೈಸೂರಿನಲ್ಲಿ ಜಲ ಕಂಟಕ ಇಲ್ಲ ಅನ್ನೋ ಸುದ್ದಿ ಜನರಿಗೆ ರಿಲೀಫ್ ಕೊಟ್ಟಿದೆ.




