ವಜ್ರದ ಹಾರಕ್ಕೆ ₹140 ಕೋಟಿ! ಮೆಟ್ ಗಾಲಾದಲ್ಲಿ ಹೈದರಾಬಾದ್ ಲೇಡಿಯ ರಾಯಲ್ ಎಂಟ್ರಿ!

ಮೆಟ್ ಗಾಲಾದಲ್ಲಿ ಅಪರೂಪದ ವಜ್ರದ ಹಾರ. ಪುರಾತನ ಕಾಲದಲ್ಲಿ ರಾಜ-ರಾಣಿಯ ಕೊರಳಲ್ಲಿ ರಾರಾಜಿಸುತ್ತಿದ್ದ ವಜ್ರಹಾರ ಈಗ ಇಂಡಿಯನ್ ಗ್ಲಾಮರ್ ವರ್ಲ್ಡ್‌ನಲ್ಲೂ ಮಿಂಚಲು ಶುರು ಮಾಡಿವೆ. ಈ ಬಾರಿ ಜಾಗತಿಕ ಫ್ಯಾಷನ್ ವೇದಿಕೆ ಮೆಟ್ ಗಾಲಾದಲ್ಲಿ ಎಲ್ಲರ ಗಮನ ಸೆಳೆದಿದೆ. ಹೈದರಾಬಾದ್ ಮೂಲದ ಉದ್ಯಮಿ ಮೇಘ ಕೃಷ್ಣ ರೆಡ್ಡಿ ಅವರ ಪತ್ನಿ ಸುಧಾ ರೆಡ್ಡಿ. ಅವರ ಲುಕ್‌ಗಿಂತ ಹೆಚ್ಚು ಸದ್ದು ಮಾಡಿದ್ದು ಅವರು ಧರಿಸಿದ್ದ ಡೈಮಂಡ್ ನೆಕ್‌ಲೇಸ್! ಬರೊಬ್ಬರಿ ₹140 ಕೋಟಿ ಮೌಲ್ಯದ ಈ ಐಷಾರಾಮಿ ವಜ್ರದ ಹಾರ ಈಗ ಅಂತರರಾಷ್ಟ್ರೀಯ ಫ್ಯಾಷನ್ ವಲಯದಲ್ಲಿ ಹಾಟ್ ಟಾಪಿಕ್ ಆಗಿ ಹರಿದಾಡ್ತಿದೆ. ಮೇ 5, 2026 ರಂದು ನಡೆದ ವಿಶ್ವಪ್ರಸಿದ್ಧ ಮೆಟ್ ಗಾಲಾದಲ್ಲಿ ಸುಧಾ ರೆಡ್ಡಿ ʼTree of Lifeʼ ಥೀಮ್‌ನಲ್ಲಿ ರಾಯಲ್ ಸ್ಟೈಲ್‌ನಲ್ಲಿ ಎಂಟ್ರಿ ಕೊಟ್ಟಿದ್ರು. ಇದು ಅವರ ಮೂರನೇ ಮೆಟ್ ಗಾಲಾ ಅಪಿಯರೆನ್ಸ್ ಆಗಿದ್ದು, ಈ ಬಾರಿಯೂ ತಮ್ಮ ಕ್ಲಾಸ್ ಮತ್ತು ಎಲಿಗನ್ಸ್‌ನಿಂದ ಕ್ಯಾಮೆರಾ ಫ್ಲ್ಯಾಶ್‌ಗಳನ್ನು ತಮ್ಮ ವಶದಲ್ಲಿರಿಸಿಕೊಂಡಿದ್ರು.

ಈ ವಿಶೇಷ ಲುಕ್‌ನ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದು ವಿಕ್ಟೋರಿಯನ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾದ ಭಾರೀ ಡೈಮಂಡ್ ಹಾರ. ತ್ರಿಕೋನ ಮತ್ತು ಪಿಯರ್ ಶೇಪ್ ಗುಲಾಬಿ ಕಟ್ ಡೈಮಂಡ್‌ಗಳಿಂದ ಸಿದ್ಧವಾಗಿದೆ. ಈ ಜ್ಯುವೆಲ್ಲರಿಯ ಹೈಲೈಟ್ ಎಂದರೆ 550 ಕ್ಯಾರೆಟ್ ಅಪರೂಪದ ಟ್ಯಾಂಜಾನೈಟ್ ರತ್ನ. ತಾಂಜೇನಿಯಾದ ಮೆರೆಲಾನಿ ಬೆಟ್ಟಗಳಿಂದ ಬಂದ ಈ ನೀಲಿ-ನೇರಳೆ ಬಣ್ಣದ ರತ್ನ ಹಾರಕ್ಕೆ ಮತ್ತಷ್ಟು ರಾಯಲ್ ಟಚ್ ನೀಡಿತು. ಇದಕ್ಕೆ ಜೊತೆಯಾಗಿ ರಾಜಸ್ಥಾನಿ ಪೋಲ್ಕಿ ಡೈಮಂಡ್ ರಿಂಗ್ ಧರಿಸಿದ್ದ ಸುಧಾ ರೆಡ್ಡಿ, ಪೂರ್ತಿ ಗ್ಲೋಬಲ್ ರಾಯಲ್ ವೈಬ್ ಕ್ರಿಯೇಟ್ ಮಾಡಿದ್ರು. ಅವರ ಡ್ರೆಸ್ ಕೂಡ ಕಡಿಮೆ ಇರಲಿಲ್ಲ. ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ರಾಯಲ್ ಬ್ಲೂ ಗೌನ್‌ನಲ್ಲಿ ಅವರು ಹೈ-ಫ್ಯಾಷನ್ ಸ್ಟೇಟ್‌ಮೆಂಟ್ ನೀಡಿದ್ದರು. ಜರ್ಡೋಜಿ ವರ್ಕ್, ಮೆಟಾಲಿಕ್ ಡೀಟೈಲಿಂಗ್ ಮತ್ತು ಲಾಂಗ್ ಟ್ರೇಲ್ ಹೊಂದಿದ್ದ ಈ ಗೌನ್ ಮೆಟ್ ಗಾಲಾ ಥೀಮ್‌ಗೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗಿತ್ತು.

ಕಾರ್ಯಕ್ರಮದ ವೇಳೆ ಮಾತನಾಡಿದ ಸುಧಾ ರೆಡ್ಡಿ, ʼಭಾರತೀಯ ಸಂಸ್ಕೃತಿ ಮತ್ತು ಕರಕುಶಲ ಕಲೆಯನ್ನು ಜಗತ್ತಿನ ಮುಂದೆ ಪ್ರೆಸೆಂಟ್ ಮಾಡುವುದು ನನ್ನ ಉದ್ದೇಶʼ ಎಂದು ಹೇಳಿದರು. ಭಾರತೀಯ ಆರ್ಟ್ ಕೇವಲ ಪರಂಪರೆ ಅಲ್ಲ, ಅದು ಲಿವಿಂಗ್ ಲೆಗಸಿ ಎಂದು ಅವರು ಹೆಮ್ಮೆಯಿಂದ ಹೇಳಿದರು. ಒಟ್ಟಿನಲ್ಲಿ ಈ ಬಾರಿ ಮೆಟ್ ಗಾಲಾದಲ್ಲಿ ಸುಧಾ ರೆಡ್ಡಿಯ ಲುಕ್ ಕೇವಲ ಫ್ಯಾಷನ್ ಅಲ್ಲ, ಅದು ಇಂಡಿಯನ್ ರಾಯಲ್ಟಿ, ಐಶಾರಾಮಿ ಮತ್ತು ಸಂಸ್ಕೃತಿಯ ಗ್ಲೋಬಲ್ ಶೋಕೆಸ್ ಆಗಿತ್ತು.

About The Author