ʼಅಮನ್‌ ಪ್ರೀತ್‌ ಸಿಂಗ್‌ ಗಿಲ್ʼ ಸಾವಿನ ಕಾರಣ ಏನು ಗೊತ್ತಾ? ಮೌನಕ್ಕೆ ಶರಣಾದ ಕ್ರಿಕೆಟ್ ಲೋಕ..!

ಭಾರತದ ಮಾಜಿ U-19 ಕ್ರಿಕೆಟರ್ ಹಾಗೂ ಪಂಜಾಬ್‌ನ ಪ್ರತಿಭಾವಂತ ವೇಗದ ಬೌಲರ್ ಅಮನ್‌ಪ್ರೀತ್ ಸಿಂಗ್ ಗಿಲ್ (36) ನಿಧನರಾಗಿದ್ದಾರೆ. ಅವರ ಅಕಾಲಿಕ ಸಾವಿನಿಂದ ಕ್ರಿಕೆಟ್ ವಲಯದಲ್ಲಿ ಶೋಕದ ಅಲೆ ಹರಡಿದೆ. ಯುವ ದಿನಗಳಲ್ಲಿ ಭಾರತ U-19 ತಂಡದ ಭಾಗವಾಗಿದ್ದ ಗಿಲ್, ಪಂಜಾಬ್ ಪರ ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲೂ ಆಡಿದ್ದರು. ಕ್ರಿಕೆಟ್ ಮೈದಾನದಿಂದ ದೂರವಾದ ಬಳಿಕವೂ ಅವರು ಕ್ರೀಡೆಯೊಂದಿಗೆ ಸಂಪರ್ಕದಲ್ಲೇ ಇದ್ದರು.

ಅವರ ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಸುದ್ದಿ ಹೊರಬಂದ ತಕ್ಷಣವೇ ಮಾಜಿ ಆಟಗಾರರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.

About The Author