ಬಿಬಿಎಂಪಿ ಹೊಸ ರೂಲ್ಸ್! ಇ-ಖಾತಾ ಪಡೆಯುವುದು ಇನ್ನಷ್ಟು ಸುಲಭ

ಬೆಂಗಳೂರು ನಗರದಲ್ಲಿನ ಆಸ್ತಿ ಮಾಲೀಕರಿಗೆ ಬಿಬಿಎಂಪಿ ಮಹತ್ವದ ಇ-ಖಾತಾ ಅಪ್‌ಡೇಟ್ ನೀಡಿದೆ. ಇ-ಖಾತಾ ಪಡೆಯುವುದು ಸುಲಭ. ಆಸ್ತಿ ದಾಖಲೆಗಳ ಪ್ರಕ್ರಿಯೆಯನ್ನು ಸಂಪೂರ್ಣ ಆನ್‌ಲೈನ್ ಮಾಡಲಾಗಿದೆ. ಮತ್ತು ಪಾರದರ್ಶಕಗೊಳಿಸಲಾಗಿದೆ. ಇ-ಖಾತಾ ವ್ಯವಸ್ಥೆಯ ಮೂಲಕ ಮನೆ ಮಾಲೀಕರು ಇದೀಗ ತಮ್ಮ ಆಸ್ತಿ ದಾಖಲೆಗಳನ್ನು ಮನೆಲ್ಲೇ ಕುಳಿತು ಡೌನ್‌ಲೋಡ್ ಮಾಡಿಕೊಳ್ಳುವ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಬಿಬಿಎಂಪಿ ಈಗಾಗಲೇ ಸುಮಾರು 21 ಲಕ್ಷಕ್ಕೂ ಹೆಚ್ಚು ಆಸ್ತಿಗಳ ಕರಡು ಇ-ಖಾತಾಗಳನ್ನು ಡಿಜಿಟಲೀಕರಣ ಮಾಡಿದ್ದು, ‘ಇ-ಆಸ್ತಿ’ ಪೋರ್ಟಲ್‌ನಲ್ಲಿ ಲಭ್ಯವಾಗುವಂತೆ ಮಾಡಿದೆ. ಆಸ್ತಿ ಮಾಲೀಕರು ಮೊಬೈಲ್ OTP ಮೂಲಕ ಲಾಗಿನ್ ಆಗಿ, ಮಾಲೀಕರ ಹೆಸರು, ಆಸ್ತಿ ವಿಳಾಸ ಅಥವಾ SAS ಸಂಖ್ಯೆ ನಮೂದಿಸಿ ಕರಡು ಇ-ಖಾತಾ ಪಡೆಯಬಹುದಾಗಿದೆ.

                       ಮನೆಯಲ್ಲೇ ಕುಳಿತು ಇ-ಖಾತಾ ಪಡೆಯಿರಿ

ಹೊಸ ವ್ಯವಸ್ಥೆಯಲ್ಲಿ ಆಧಾರ್ ಆಧಾರಿತ E-KYC ಮೂಲಕ ಮ್ಯೂಟೇಶನ್ ಪ್ರಕ್ರಿಯೆಯನ್ನೂ ಆನ್‌ಲೈನ್‌ನಲ್ಲಿ ನಡೆಸಲು ಅವಕಾಶ ಕಲ್ಪಿಸಲಾಗಿದೆ. ವಿವಾದರಹಿತ ಪ್ರಕರಣಗಳಲ್ಲಿ ಕೇವಲ ಕೆಲವೇ ದಿನಗಳಲ್ಲಿ ಮ್ಯೂಟೇಶನ್ ಅನುಮೋದನೆ ಸಿಗಲಿದ್ದು, ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವ ಉದ್ದೇಶವನ್ನು ಬಿಬಿಎಂಪಿ ಹೊಂದಿದೆ. ಇನ್ನು A ಖಾತಾ ಮತ್ತು B ಖಾತಾ ಎರಡನ್ನೂ ಇ-ಖಾತಾ ವ್ಯವಸ್ಥೆಗೆ ಒಳಪಡಿಸಲಾಗಿದ್ದು, ಆಸ್ತಿ ಖರೀದಿ-ಮಾರಾಟ, ಬ್ಯಾಂಕ್ ಸಾಲ, ತೆರಿಗೆ ಪಾವತಿ ಸೇರಿದಂತೆ ಹಲವು ಸೇವೆಗಳಿಗೆ ಇ-ಖಾತಾ ಕಡ್ಡಾಯವಾಗುವ ಸಾಧ್ಯತೆ ಇದೆ. ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಖಾತಾ ಸೇವೆ ಲಭ್ಯವಿದ್ದು, ಸಾರ್ವಜನಿಕರಿಗೆ ಸಹಾಯಕ ಸೇವೆ ಒದಗಿಸಲಾಗುತ್ತಿದೆ. ಕೆಲ ಪ್ರದೇಶಗಳಲ್ಲಿ ತಾಂತ್ರಿಕ ಸಮಸ್ಯೆಗಳು ಮತ್ತು ದಾಖಲೆ ವ್ಯತ್ಯಾಸಗಳಿಂದ ವಿಳಂಬ ಉಂಟಾಗುತ್ತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಸಮಸ್ಯೆಗಳನ್ನು ಹಂತ ಹಂತವಾಗಿ ಸರಿಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

About The Author