Political News: ನಾ ನಾಯಕಿ : BJP ಅಂದ್ರೆ ಯಾಕಷ್ಟು ದ್ವೇಷ..?: Najma Nazeer Chikkanerale Podcast

Political News: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ನಜೀರ್ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ಬಿಜೆಪಿ ಬಗ್ಗೆ ಅಸಮಾಧಾನ ಇರುವ ಬಗ್ಗೆ ಮಾತನಾಡಿದ್ದಾರೆ. ಯಾಕೆ ತಮಗೆ ಬಿಜೆಪಿ ಅಂದರೆ ಇಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಉದಾಹರಣೆ ಸಮೇತವಾಗಿ ಮಾತನಾಡಿರುವ ನಜ್ಮಾ, 1 ಮನೆಯಲ್ಲಿ 5 ಜನ ಮಕ್ಕಳಿರುತ್ತಾರೆ. ಎಲ್ಲರೂ ತಮ್ಮ ಮಕ್ಕಳೇ ಆಗಿರುತ್ತಾರೆ. ಅವರಿಗೆಲ್ಲ ತಂದೆ ತಾಯಿ ಸರಿಸಮಾನವಾಗಿ ಆಹಾರ ನೀಡಬೇಕು. ಆದರೆ 5 ಮಕ್ಕಳಲ್ಲಿ ಅಪ್ಪ ಅಮ್ಮ ತಾರತಮ್ಯ ಮಾಡಿದಾಗ, ಮಕ್ಕಳಿಗೆ ಕೋಪ ಬರುವುದು ಸಹಜ. ಅದೇ ರೀತಿ ಬಿಜೆಪಿ ಮುಸಲ್ಮಾನರ ಜತೆ ತಾರತಮ್ಯ ಮಾಡುತ್ತಿದೆ ಎಂದು ನಜ್ಮಾ ಆರೋಪಿಸಿದ್ದಾರೆ.

ದಕ್ಷಿಣ ಭಾರತೀಯರ ಹಕ್ಕನ್ನು ಬಿಜೆಪಿ ಕಿತ್ತುಕ“ಳ್ಳುತ್ತಿದೆ. ಉದ್ಯೋಗದ ಹಕ್ಕನ್ನು ಕಿತ್ತುಕ“ಳ್ಳುತ್ತಿದೆ. ಆದರೆ ಹಿಂದೂ-ಮುಸ್ಲಿಂ ಅನ್ನೋ ಭೂತ ಎಂಬ ಹೆಸರಿರಿಸಿದೆ. ಮುಸಲ್ಮಾನರನ್ನು ನಿಜಕ್ಕೂ ಇವರು ವಿರೋಧಿಸುವವರಾಗಿದ್ದಕೆ, ಇವರ್ಯಾಕೆ ಅಫಘಾನಿಸ್ತಾನದವರಿಗೆ ಬಜೆಟ್‌ನಲ್ಲಿ ಕೋಟಿ ಕೋಟಿ ಹಣ ನೀಡುತ್ತಿದ್ದರು..? ಸೌದಿ ರಾಜರನ್ನೆಲ್ಲ ಯಾಕೆ ತಬ್ಬಿಕ“ಳ್ಳುತ್ತಿದ್ದರು.?

ಅವರಿಗೆ ದ್ವೇಷ ಇರೋದು ಇಲ್ಲಿನ ಬಹುಸಂಖ್ಯಾತರಾಗಿರುವ ಶೂದ್ರ ಸಮುದಾಾಯಗಳ ಮೇಲೆ. ಆ ಬಗ್ಗೆ ನೇರವಾಗಿ ಮಾತನಾಡಿದ್ರೆ, ಅವರ ವೋಟ್ ಬ್ಯಾಂಕ್ ಚೂರು ಚೂರಾಗತ್ತೆ. ಹಾಗಾಗಿ ಹಿಂದೂ-ಮೂುಸ್ಲಿಂ ಎಂದು ಜಗಳವಾಡಿಸುತ್ತ ಇವರು ವೋಟ್ ಪಡೆಯುತ್ತಿದ್ದಾರೆಂದು ನಜ್ಮಾ ನಜೀರ್ ಆರೋಪಿಸಿದ್ದಾರೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author