ನಾ ನಾಯಕಿ : ರಾಜಕಾರಣದಲ್ಲಿರುವ ಹೆಣ್ಣುಮಕ್ಕಳನ್ನು ನೋಡೋ ರೀತಿನೆ ಬೇರೆ : Najma Nazeer Chikkanerale

Political News: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ನಜೀರ್ ಚಿಕ್ಕನೇರಳೆ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅನಿವಾರ್ಯ ಕಾರಣದಿಂದ ನಾನು ಜೆಡಿಎಸ್ ಹೋಗಬೇಕಾಯ್ತು ಎಂದಿದ್ದಾರೆ. ಹಾಗಾದ್ರೆ ಆ ಅನಿವಾರ್ಯತೆ ಏನಾಗಿತ್ತು ಅನ್ನೋದನ್ನೂ ಕೂಡ ಅವರೇ ವಿವರಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಜ್ಮಾ, ಅನಿವಾರ್ಯತೆ ಜತೆಗೆ ನನಗೆ ಆ ಪಕ್ಷದ ಬಗ್ಗೆ ಮೆಚ್ಚುಗೆಯೂ ಇತ್ತು. ಏಕೆಂದರೆ, ಅದು ಆಗ ಹೆಸರಿಗೆ ತಕ್ಕಂತೆ ಜಾತ್ಯಾತೀಯ ಪಕ್ಷವಾಗಿತ್ತು. ಅನಿವಾರ್ಯತೆ ಅಂದ್ರೆ, ಅಂದೆಲ್ಲ ದ್ವೇಷ ರಾಜಕಾರಣದ ವಿರುದ್ಧ ಧ್ವನಿ ಎತ್ತುವುದು ತುಂಬಾ ಕಷ್ಟವಾಗಿತ್ತು. ಅಂಥ ದಿನಗಳಲ್ಲಿ ಹೆಣ್ಣು ಮಕ್ಕಳು ಸೇರಬಹುದಾದ ಅತ್ಯುತ್ತಮ ಪಕ್ಷ ಅಂದ್ರೆ ಜೆಡಿಎಸ್ ಆಗಿತ್ತು. ಹಾಗಾಗಿ ನಾನು ಜೆಡಿಎಸ್ ಸೇರಿದೆ ಎನ್ನುತ್ತಾರೆ ನಜ್ಮಾ ನಜೀರ್ ಚಿಕ್ಕನೇರಳೆ.

ಬಳಿಕ ಧರ್ಮಗಳ ಮಧ್ಯೆ ದ್ವೇಷ ರಾಜಕಾರಣ ಬಿತ್ತು, ಸಂವಿಧಾನವನ್ನೇ ಬದಲಿಸಬೇಕು ಎನ್ನುವ ಬಿಜೆಪಿ ಪಕ್ಷದ ಜತೆ ಜೆಡಿಎಸ್ ಕೈ ಜೋಡಿಸಿದಾಗ, ನನ್ನ ಸಿದ್ಧಾಂತಕ್ಕೆ ಧಕ್ಕೆ ಬಂದ ಕಾರಣಕ್ಕೆ ನಾನು ಕಾಂಗ್ರೆಸ್ ಪಕ್ಷಕ್ಕೆ ಬಂದೆ ಎಂದು ನಜ್ಮಾ ನಜೀರ್ ಚಿಕ್ಕನೇರಳೆ ಹೇಳಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author