Mangaluru News: ಈಗಿನ ಕಾಲದಲ್ಲಿ ಹಲವರು ಬರ್ತ್‌ಡೇ ಅಂದ್ರೆ ಬರೀ ಪಾರ್ಟಿ ಮಾಡಿ, ಕುಡಿದು ತಿಂದು ಎಂಜಾಯ್ ಮಾಡ್ತಾರೆ. ಆಡಂಬರ, ಅಬ್ಬರದಿಂದ ಜನ್ಮದಿನ ಆಚರಿಸುತ್ತಾರೆ. ಮತ್ತೆ ಕೆಲವರು ಸಮಾಜ ಸೇವೆ ಮಾಡಿದ್ರೆ, ಇನ್ನು ಕೆಲವರು ಅನಾಥಾಶ್ರಮ, ವೃದ್ಧಾಶ್ರಮದಲ್ಲಿ ಅನ್ನದಾನ, ವಸ್ತ್ರದಾನದಂಥ ಪುಣ್ಯ ಕಾರ್ಯಗಳನ್ನು ಮಾಡ್ತಾರೆ.
ಆದರೆ ಇಲ್ಲೋರ್ವ ಉದ್ಯಮಿ, ತನ್ನ ಮಗಳ ಜನ್ಮದಿನದಂದು ತನ್ನೂರ ವಿದ್ಯಾರ್ಥಿಗಳಿಗೆ 15 ಲಕ್ಷ ರೂಪಾಯಿ ನೆರವು ನೀಡಿದ್ದಾರೆ. ತುಳುನಾಡ ಸೇನಾ ಸಂಸ್ಥಾಪಕ, ಮುಂಬೈ ಉದ್ಯಮಿ, ಸುರೇಶ್ ಶೆಟ್ಟಿ ಈ ಮಹತ್ಕಾರ್ಯ ಮಾಡಿದ್ದಾರೆ.
ಬಡತನ, ವಿದ್ಯಾಭ್ಯಾಸದ ಮಹತ್ವ ಅರಿತಿರುವ ಸುರೇಶ್ ಅವರು, 200ಕ್ಕೂ ಹೆಚ್ಚು ಮಕ್ಕಳಿಗೆ ಮಗಳ ಜನ್ಮದಿನದ ನಿಮಿತ್ತ, ವಿದ್ಯಾರ್ಥಿಗಳಿಗೆ ಧನಸಹಾಯ ಮಾಡಿದ್ದಾರೆ. 200 ವಿದ್ಯಾರ್ಥಿಗಳಿಗೆ ತಲಾ 5 ಸಾವಿರದಂತೆ ಹತ್ತ ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಿದ್ದಾರೆ. 1,360 ವಿದ್ಯಾರ್ಥಿಗಳಿಗೆ 5 ಲಕ್ಷ ವೆಚ್ಚದ ಪುಸ್ತಕ, ಬ್ಯಾಗ್, ಛತ್ರಿಗಳನ್ನು ವಿತರಿಸಿದ್ದಾರೆ. ಈ ಮೂಲಕ ಮಗಳ ಜನ್ಮದಿನವನ್ನು ಅರ್ಥಯುತವಾಗಿ ಆಚರಿಸಿದ್ದಾರೆ.




