Political News: ಕಾಂಗ್ರೆಸ್ ನಾಯಕಿ ನಜ್ಮಾ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ತಮಗೆ ರಾಜಕೀಯ ಜೀವನದಲ್ಲಾಗಿರುವ ಕಹಿ ಅನುಭವಗಳ ಬಗ್ಗೆ ಹೇಳಿಕ“ಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ನಾನು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಿದ್ರು, ಅದಕ್ಕೆ ಬ್ಯಾಡ್ ಕಾಮೆಂಟ್ಸ್ ಬರೋದು ಸರ್ವೇ ಸಾಮಾನ್ಯವಾಗಿದೆ. ನಾಾನು ಯಾಾರಿಗಾದರೂ ವಿಶ್ ಮಾಡಿದ್ರೆ, ಅವರ ಜತೆ ಸಂಬಂಧ ಕಲ್ಪಿಸಿ, ಟ್ರೋಲ್ ಮಾಡ್ತಾರೆ. ಕಾಮೆಂಟ್ಸ್ ಮಾಡ್ತಾರೆ. ಕೆಲವರು ನನ್ನ ನ್ಯೂಡ್ ಪಿಕ್ ಜನರೇಟ್ ಮಾಡಿ, ಬುಲ್ಲಿ ಅನ್ನೋ ಆ್ಯಪ್ನಲ್ಲಿ ಸೇಲ್ಗೆ ಇಟ್ಟಿದ್ರು. ಈ ರೀತಿ ಎಲ್ಲಾ ಸಮಸ್ಯೆಗಳನ್ನು ನಾನು ನನ್ನ ದಿನನಿತ್ಯದ ರಾಜಕೀಯ ಜೀವನದಲ್ಲಿ ಅನುಭವಿಸುತ್ತಿದ್ದೇನೆ ಎಂದಿದ್ದಾರೆ ನಜ್ಮಾ.
ಅಲ್ಲದೇ, ಆ ರೀತಿ ಬ್ಯಾಡ್ ಕಾಮೆಂಟ್ಸ್ ಮಾಡುವವರನ್ನು ನೋಡಿದ್ರೆ, ಅವರ ಮನೆ ಹೆಣ್ಣು ಮಕ್ಕಳನ್ನು ಅವರು ಅದೆಷ್ಟು ಕೆಟ್ಟದಾಗಿ ಟ್ರೀಟ್ ಮಾಡಬಹುದು ಅಂತಾ ನೆನೆಸಿಕ“ಂಡಾಗ ಬೇಸರವಾಗತ್ತೆ. ನನಗೆ ಯಾರೂ ಎಷ್ಟೇ ಟ್ರೋಲ್ ಮಾಡಿದ್ರೂ, ಕೆಟ್ಟದಾಗಿ ಮಾತನಾಡಿದ್ರೂ, ನಾನೆಂದೂ ಎದೆಗುಂದಿಲ್ಲ. ಕಾರಣ ಈ ರೀತಿಯ ಸಮಸ್ಯೆ ರಾಜಕೀಯಕ್ಕೆ ಬರುವ ಪ್ರತೀ ಹೆಣ್ಣು ಮಕ್ಕಳಿಗೂ, ಅದರಲ್ಲೂ ಮುಸ್ಲಿಂ ಹೆಣ್ಣು ಮಕ್ಕಳಿಗೆ ಕಾಮನ್ ಸಮಸ್ಯೆಯಾಗಿದೆ ಎನ್ನುತ್ತಾರೆ ನಜ್ಮಾ ನಜೀರ್.
ಅಲ್ಲದೇ, ನನ್ನ ಅಮ್ಮ ನನಗೆ 1 ಸಲಹೆ ನೀಡಿದ್ದಾರೆ. ನೀನು ಮಾಡುತ್ತಿರುವ ಕೆಲಸ ತಪ್ಪು ಅಲ್ಲ ಎಂದು ನಿನಗೆ ಎಲ್ಲಿವರೆಗೂ ಎನ್ನಿಸುತ್ತದೆಯೋ, ನೀನು ಸರಿ ಎಂದು ನಿನ್ನ ಮನಸಾಕ್ಷಿ ಎಲ್ಲಿಯವರೆಗೂ ಹೇಳುತ್ತದೆಯೋ, ಅಲ್ಲಿಯವರೆಗೂ ಆ ಕೆಲಸ ಮಾಡುವುದನ್ನು ಬಿಡಬೇಡ. ನೀನು ಸರಿ ಅಂದಮೇಲೆ, ಲಕ್ಷಾಂತರ ನಾಾಯಿಗಳು ಬ“ಗಳುಿದರೂ ಆನೆ ನಡೆದಿದ್ದೇ ದಾರಿ ಅಂತಾ ನಡೆಯುವುದನ್ನು ಕಲಿತುಕೋ ಎಂದಿದ್ದಾರೆ ಎಂದು ತಮ್ಮ ತಾಯಿಯ ಮಾತನ್ನು ನೆನಪಿಸಿಕ“ಂಡಿದ್ದಾರೆ ನಜ್ಮಾ ನಜೀರ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




