ಮುಸ್ಲಿಮರಿಗೆ ಟಿಕೆಟ್ ಕೊಟ್ಟಿಲ್ಲಾ ಅನ್ನೋದು ಬೇಜಾರ್ ಆಯ್ತು : Najma Nazeer Chikkanerale Podcast

Political News: ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣೆಯಲ್ಲಿ ಮುಸ್ಲಿಂಮರಿಗೆ ಟಿಕೇಟ್ ನೀಡಿಲ್ಲವೆಂಬ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕಿ, ನಜ್ಮಾ ಚಿಕ್ಕನೇರಳೆ , ಮುಸ್ಲಿಂರಿಗೆ ಟಿಕೇಟ್ ನೀಡಿಲ್ಲವೆಂಬ ಬಗ್ಗೆ ಬೇಸರವಾಗಿತ್ತು ಎಂದಿದ್ದಾರೆ.

ಈ ಬಗ್ಗೆ ಮಾತು ಮುಂದುವರಿಸಿದ ಅವರು, ಖಂಡಿತವಾಗಿಯೂ ಮುಸ್ಲಿಂರಿಗೆ ಟಿಕೇಟ್ ನೀಡಿಲ್ಲವೆಂಬ ಬಗ್ಗೆ ನನಗೆ ಬೇಸರವಾಯಿತು. ಆದರೆ ಕಾಂಗ್ರೆಸ್‌ನ ಗ್ಯಾರಂಟಿಗಳು, ಸಿದ್ದರಾಮಯ್ಯ ಸಾಹೇಬ್ರು, ಡಿಕೆಶಿ ಸಾಹೇಬ್ರು ರಾಜ್ಯದ ಜನತೆಗಾಗಿ ಮಾಡುತ್ತಿರುವ ಜನಪರ ಕೆಲಸಗಳು ಚುನಾವಣೆಯಲ್ಲಿ ಗೆಲುವು ತಂದು ಕೊಟ್ಟಿದೆ ಎಂದು ಅವರು ಹೇಳಿದ್ದಾರೆ.

ಮುಸ್ಲಿಂರಿಗೆ ಟಿಕೇಟ್ ನೀಡಿ ಎಂದು ನಮ್ಮ ಹೈಕಮಾಂಡ್‌ಗೆ ಕೂಡ ನಾವು ರಿಕ್ವೆಸ್ಟ್ ಮಾಡಿದ್ದೆವು. ಆದರೆ ಕಾಂಗ್ರೆಸ್ ನಾಯಕಿಯಾಗಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವನ್ನು ನಾವು ಸ್ವಾಗತಿಸಬೇಕಾಗುತ್ತದೆ. ಹಾಗಾಗಿ ನಾನು ಆ ನಿರ್ಧಾರವನ್ನು ಸ್ವಾಗತಿಸಿದ್ದೇನೆ ಎಂದು ನಜ್ಮಾ ನಜೀರ್ ಹೇಳಿದ್ದಾರೆ.

ಅಲ್ಲದೇ 2018ರಿಂದ 2023ರವರೆಗೆ ಬಿಜೆಪಿ ಮುಸಲ್ಮಾನರ ಮೇಲೆ ನಡೆಸಿದ ದಬ್ಬಾಳಿಕೆಯನ್ನು ನಾವು ನೋಡಿದ್ದೇವೆ. ಆವಾಗ ನಾವು ಅವರನ್ನು ಗೆಲ್ಲಿಸಿ ತಕ್ಕ ಪಾಠ ಕಲಿತಿದ್ದೇವೆ. ಹಾಗಾಗಿ ಮುಸ್ಲಿಂರಿಗೆ ಕಾಂಗ್ರೆಸ್ ಗೆಲ್ಲುವುದು ಎಷ್ಟು ಅನಿವಾರ್ಯ ಎಂದು ತಿಳಿದಿದೆ. ಆ ಪ್ರಜ್ಞೆ ಕೂಡ ಇದೆ. ಆ ಕೆಲಸವನ್ನು ಅವರು ಮಾಡುತ್ತಾರೆ ಎಂದು ನಜ್ಮಾ ನಜೀರ್ ಹೇಳಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author