Political News: ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರ್, ಬಿಡದಿ ಟೌನ್ ನಿರ್ಮಾಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಪ್ರಶ್ನೆ ಡಿಕೆಶಿ ವರ್ಸಸ್ ಹೆಚ್ಡಿಕೆ ಅಲ್ಲಾ. ಇಲ್ಲಿ ರೈತರ ಬದುಕಿನ ಪ್ರಶ್ನೆಯಾಗಿದೆ. ರೈತರ ಬದುಕಿನ ಜತೆ ಚಲ್ಲಾಟ ಆಡೋದು ಬೇಡಾ. ಅಲ್ಲಿ ಕೃಷಿನೇ ಮಾಡಲ್ಲಾ. ಅಲ್ಲಿ ರೈತರೇ ಇಲ್ಲ. ನಾನು ಬಿಡದಿ ಟೌನ್ ಮಾಡೇ ಮಾಡ್ತೀನಿ ಎಂದು ಡಿಸಿಎಂ ಹೇಳಿದ್ದಾರೆ. ಆದರೆ ಡಿಸಿಎಂ ಅವರು ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಜಿಲ್ಲಾಡಳಿತ ಅಧಿಕಾರಿಗಳಾಗಲಿ ಅಲ್ಲಿ ಸುತ್ತಮುತ್ತಲ ಹಳ್ಳಿಗಳಿಗೆ ಹೋಗಿ, ರೈತರ ಜತೆ ಸಭೆ ಮಾಡಿದೆಯಾ..?
ಬಿಡದಿ ಟೌನ್ ಮಾಡುವ ಬಗ್ಗೆ ನಿಮ್ಮ ಅಭಿಪ್ರಾಯವೇನು..? ಇದನ್ನು ನೀವು ಸರಿ ಅಂತೀರಾ ಅಂತೆಲ್ಲ ಪ್ರಶ್ನಿಸಬೇಕಿದೆ. ನಾನು ಚಿಕ್ಕ ವಯಸ್ಸಿನಿಂದ ಇದ್ದು ಬಂದ ಜಾಗ ಅದು. ನನ್ನ ಕಣ್ಣಾರೆ ನೋಡಿ ಬೆಳೆದಿದ್ದೇನೆ 1 ವರ್ಷ ಮಳೆ ಬರದಿದ್ದರೂ, ಫಲವತ್ತಾಗಿರುವ ಭೂಮಿ ಅದು. ಆದರೆ ಇಲ್ಲಿ ನೀವು ಟೌನ್ ಶಿಪ್ ಮಾಡ್ತೇನೆ ಅಂತಾ ಹೇಳ್ತಿದ್ದೀರಿ. ನಿಮಗೆ ಬಂಜರು ಭೂಮಿ ಹುಡುಕಲು ಆಗೋದಿಲ್ವಾ ಅಂತಾ ನಿಖಿಲ್ ಪ್ರಶ್ನಿಸಿದ್ದಾರೆ.
ಬಿಡದಿಯ ಎಲ್ಲಾ ಹಳ್ಳಿಗಳಿಗೂ ಹೋಗೋಣ, ರೈತರ ಬಳಿ ಮಾತಾಡೋಣಾ. ನಿಮ್ಮ ಡಿಸಿಎಂ ಅವರು ಬರ್ತಾರಾ..? ನಾನ್ ರೆಡಿ ಇದಿನಿ ಅಂತಾ ನಿಖಿಲ್ ಕುಮಾರ್ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸವಾಲ್ ಎಸೆದಿದ್ದಾರೆ.
ಬಿಡದಿ ಟೌನ್ ಶಿಪ್ ಗೆ ಸಂಬಂಧಿಸಿದಂತೆ ಬಂದಿರುವ ಪ್ರಶ್ನೆ HDK VS DK ಅಲ್ಲ! ಅದು ರೈತರ ಬದುಕಿನ ಪ್ರಶ್ನೆ.
ಟೌನ್ ಶಿಪ್ ಮಾಡುತ್ತಿರುವ ಜಾಗದಲ್ಲಿ ರೈತರೇ ಇಲ್ಲ ಎಂದು ಹೇಳುವ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರೇ, ಬನ್ನಿ! ನಾವೆಲ್ಲರೂ ಸೇರಿ ಸೌಹಾರ್ಧಯುತವಾಗಿ ಆ ಭಾಗದ ರೈತರನ್ನು ಭೇಟಿ ಮಾಡಿ, ಅವರ ಕಷ್ಟ- ಸುಖ… pic.twitter.com/UBTysIP1Oi
— Nikhil Kumar (@Nikhil_Kumar_k) May 22, 2026




