ಲಾಟರಿ ಕಲ್ಯಾಣ ನಿಧಿಯಿಂದ ದೋಚಿದ್ದ 14 ಕೋಟಿ ರೂಪಾಯಿ ಹಣ ಸುಟ್ಟು ಹಾಕಿದ ಆರೋಪಿ..

Tiruvananthpuram: ಲಾಟರಿ ಕಲ್ಯಾಣ ನಿಧಿಯಿಂದ ದೋಚಿದ್ದ ಹಣವನ್ನು ಸುಟ್ಟು ಹಾಕಿದ್ದ ಆರೋಪಿ, ಇದೀಗ ತನ್ನ ತಪ್ಪನ್ನು ಒಪ್ಪಿಕ“ಂಡಿದ್ದಾನೆ.

ಕೇರಳ ಲಾಟರಿ ಕಲ್ಯಾಣ ನಿಧಿ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸಂಗೀತ್, ಅವಕಾಶ ಸಿಕ್ಕಾಗ ನಿಧಿಯಿಂದ ಚೆನ್ನಾಗಿ ಹಣ ದೋಚಿದ್ದ. ಆದರೆ 2016ರಲ್ಲಿ ಪ್ರಧಾನಿ ಮೋದಿ ನೋಟ್ ಬ್ಯಾನ್ ಮಾಡಿದ್ದ ಸಂದರ್ಭದಲ್ಲಿ ಈತ ದೋಚಿದ್ದೆಲ್ಲವೂ ವ್ಯರ್ಥವಾಗಿತ್ತು.

ಹಾಗಾಗಿ ಆ ಹಣವನ್ನು ಸುಟ್ಟು ಬೂದಿ ಮಾಡಿದ್ದ. ತನಗೆ ಆ ಹಣವನ್ನು ಉಪಯೋಗಿಸಲು ಸಾಧ್ಯವಾಗಿಲ್ಲವೆಂದು ಆ ಹಣವವನ್ನೆಲ್ಲ ಸುಟ್ಟು ಹಾಕಿದೆ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ.

ಈತ ದೋಚಿದ ಹಣವೆಷ್ಟು ತಿಳಿದರೆ ನೀವು ದಂಗಾಗೋದು ಗ್ಯಾರಂಟಿ. ಬರೋಬ್ಬರಿ 14 ಕೋಟಿ ರೂಪಾಯಿ ಹಣವನ್ನು ನಕಲಿ ಸಹಿ ಹಾಕುವ ಮೂಲಕ, ಈತ ತನ್ನ ಖಾತೆ ವರ್ಗಾವಣೆ ಮಾಡಿದ್ದ. ಆದರೆ ನೋಟ್ ಬ್ಯಾನ್ ಆದ ಮೇಲೆ ಹಣಕ್ಕಿದ್ದ ಬೆಲೆಯೇ ಹೋಯ್ತು. ಹಾಗಾಗಿ 2017ರಲ್‌ಲಿ ತನ್ನ ಮನೆಯಲ್ಲೇ ಹಣವನ್ನೆಲ್ಲ ಸುಟ್ಟು ಹಾಕಿದೆ ಎಂದು ಹೇಳಿಕೆ ನೀಡಿದ್ದಾನೆ.

 

About The Author