Panjab News: ಭಗ್ನಪ್ರೇಮಿಯೋರ್ವ ತನ್ನ ಪ್ರೇಯಸಿಯನ್ನ ಚಾಾಕುವಿನಿಂದ ಚುಚ್ಚಿ ಚುಚ್ಚಿ ಸಾಯಿಸಿದ್ದಾರೆ. ಅಲ್ಲದೇ, ತನ್ನನ್ನು ತಾನು ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.
ಪಂಜಾಬ್ನ ಮೊಹಾಲಿಯಲ್ಲಿ ಈ ಘಟನೆ ನಡೆದಿದ್ದು, ಈ ಕೃತ್ಯ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಲ್ಲಿನ ಖಾಸಗಿ ಕಚೇರಿಯಲ್ಲೇ ಈ ಕೃತ್ಯ ಎಸಗಿದ್ದು, ಮೃತ ಯುವತಿ ಡಿಂಪಲ್ ಮತ್ತು ಹರ್ವಿಂದರ್ ಮಾನ್ ಅಲಿಯಾಸ್ ಹ್ಯಾರಿ ಎಂದು ಗುರುತಿಸಲಾಗಿದೆ.
ಇಬ್ಬರೂ 1 ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದು, ಇಬ್ಬರ ನಡುವೆ ಯಾವುದೋ ಮಾತಿಗೆ ವಾಗ್ವಾದ ನಡೆದಿದೆ. ಕಚೇರಿಯಲ್ಲೇ ಎಲ್ಲರ ಮುಂದೆ ಹ್ಯಾರಿ ಡಿಂಪಲ್ಗೆ ಚಾಕು ಇರಿದಿದ್ದಾನೆ.ಅಲ್ಲೇ ಇದ್ದ ಸಹೋದ್ಯೋಗಿಗಳು ಹ್ಯಾರಿಯನ್ನು ತಡೆಯಲು ವಿಫಲರಾಗಿದ್ದಾರೆ. ಅಲ್ಲದೇ ಹ್ಯಾರಿ ಕೂಡ ಚಾಕುವಿನಿಂದ ಇರಿದು, ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸಹೋದ್ಯೋಗಿಗಳು ಪೋಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಡಿಂಪಲ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದರೆ, ಹ್ಯಾರಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೋಲೀಸರು ದೂರು ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.




