ಮೋದಿ ಬಹಿರಂಗ ಪತ್ರಿಕಾಗೋಷ್ಠಿ ನಡೆಸಲಿ: ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ಬಹಿರಂಗ ಸವಾಲ್

Political News: ನಿನ್ನೆ ಸಚಿವ ಪ್ರಿಯಾಂಕ್ ಖರ್ಗೆಯವರು ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದರು. ಜನತೆಗೆ ಬೆಲೆ ಏರಿಕೆ ಎಂಬ ಗಾಯ ಮಾಡಿದ ಮೋದಿ ಸರ್ಕಾರ, ಆ ಗಾಯದ ಮೇಲೆ ಅದೇ ಬೆಲೆ ಏರಿಕೆಯ ಬರೆಯನ್ನು ಎಳೆಯುತ್ತಿದೆ. ಕೆಲ ದಿನಗಳ ಹಿಂದೆ ದೇಶದಲ್ಲಿ ಕಚ್ಚಾ ತೈಲದ ಸಂಗ್ರಹ ಸಾಕಷ್ಟಿದೆ ಎಂದಿದ್ದ ಕೇಂದ್ರ ಸರ್ಕಾರ, ಈಗ ಇಂಧನ ತೈಲಗಳ ಬಳಕೆ ಕಡಿಮೆ ಮಾಡಿ ಎನ್ನುತ್ತಿದೆ. ದಿನಕ್ಕೊಮ್ಮೆ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದಕ್ಕೆ ಎಕ್ಸ್ ಖಾತೆ ಮೂಲಕ ತಿರುಗೇಟು ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, 32 ದೇಶಗಳ ಅತ್ಯುನ್ನತ ಗೌರವಗಳನ್ನು ಪಡೆದ ವಿಶ್ವನಾಯಕ ಆದರಣೀಯ ಪ್ರಧಾನಿ ಮೋದಿ ಜೀ ರವರ ಬಗ್ಗೆ ನಿಮ್ಮ ಅಸಹನೆ ಅರ್ಥವಾಗುತ್ತದೆ. ಇದು ಆಕಾಶ ನೋಡಿ ಮೇಲೆ ಉಗಿದಂತೆ! ಎಂದಿದ್ದರು.

ಇದೀಗ ಪ್ರಿಯಾಂಕ್ ಖರ್ಗೆ ಬಿಜೆಪಿಗರಿಗೆ ಬಹಿರಂಗ ಸವಾಲ್ ಎಸೆದಿದ್ದಾರೆ. ತಮ್ಮ ಆಡಳಿತ ವೈಫಲ್ಯವನ್ನು “ದೇಶದ ಬಿಕ್ಕಟ್ಟಿನ ಸಮಯ” ಎಂಬ ಪರದೆಯನ್ನು ಮುಂದೆ ಹಿಡಿದು, ಅದರ ಹಿಂದೆ ಅಡಗಿ ರಕ್ಷಣೆ ಪಡೆಯುವ ಕಲೆ ಬಿಜೆಪಿಗೆ ಕರಗತವಾಗಿರುವ ವಿದ್ಯೆ! ಚಿಟಕಿ ಹೊಡೆಯುವಷ್ಟರಲ್ಲಿ ಎಂತಹ ಬಿಕ್ಕಟ್ಟನ್ನು ಬೇಕಿದ್ದರೂ ನಿವಾರಿಸುವ ಶಕ್ತಿ ಇದೆ ಎಂದು ತಾವುಗಳು ಹೊಗಳುವ ನಿಮ್ಮ ಸೋಕಾಲ್ಡ್ ವಿಶ್ವನಾಯಕ, ನಾನ್ ಬಯಾಲಾಜಿಕಲ್ ಪಿಎಂಗೆ ಈ ಬಿಕ್ಕಟ್ಟು ಸಣ್ಣ ವಿಷಯವಲ್ಲವೇ ಶ್ರೀ ಬಿ.ವೈ.ವಿಜಯೇಂದ್ರ ಅವರೇ?! ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

“ಪಾಪ ಕ್ಯೂ ನಹಿ ವಾರ್ ರುಕ್ವಾ ದಿಯಾ”? ಈ ವಿಷಯಗಳು ಒಂದೆಡೆ ಇರಲಿ, ಬಿಜೆಪಿಗರಿಗೆ ಒಂದು ಸವಾಲು… ನಿಮ್ಮ ವಿಶ್ವಗುರುವಿಗೆ ಒಂದೇ ಒಂದು ಸಾರಿ ಬಹಿರಂಗ ಪತ್ರಿಕಾಗೋಷ್ಠಿ ನಡೆಸಲು ಹೇಳಿ, ಅಲ್ಲಿ ಮೋದಿಯವರು ಹೇಳುವ ವಿಷಯಗಳನ್ನು ನೀವೂ ಪ್ರತಿಪಾಧಿಸಿ, ಆಗ ನಿಮ್ಮ ವಾದಗಳಿಗೆ ನಿಜಾರ್ಥ ಬರುತ್ತದೆ.. ಮೋದಿಯವರು ಮುಕ್ತ ಪತ್ರಿಕಾಗೋಷ್ಠಿ ನಡೆಸಿ ದೇಶದ ಪ್ರಶ್ನೆಗಳಿಗೆ ಉತ್ತರಿಸಿದ ದಿನದಿಂದ ನಮ್ಮ್ಕ್ ಪ್ರಶ್ನೆಗಳು ನಿಲ್ಲುತ್ತವೆ.. ಈ ಸವಾಲನ್ನಾದರೂ ಸ್ವೀಕರಿಸುವಿರಾ? ಎಂದು ಬಿಜೆಪಿಗರಿಗೆ ಪ್ರಿಯಾಂಕ್ ಖರ್ಗೆ ಸವಾಲ್ ಹಾಕಿದ್ದಾರೆ.

About The Author