Sandalwood: ಮೊಮ್ಮಗ ಅರ್ಜುನ್ ಹುಟ್ಟುಹಬ್ಬಕ್ಕೆ ಸ್ಪೆಶಲ್ ಗಿಫ್ಟ್ ನೀಡಿದ ತಾತ ಜಗ್ಗೇಶ್..

Sandalwood: ನಟ ಜಗ್ಗೇಶ್ ಮೊಮ್ಮಗ ಅರ್ಜುನ್ ಜನ್ಮದಿನದ ಸಂಭ್ರಮದಲ್ಲಿದ್ದು, ಜಗ್ಗೇಶ್ ಅರ್ಜುನ್‌ಗೆ ಸ್ಪೆಶಲ್ ಗಿಫ್ಟ್ ನೀಡಿದ್ದಾರೆ.

ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಜಗ್ಗೇಶ್  ಅರ್ಜುನ್‌ಗೆ ಹಾರೈಸಿದ್ದಾರೆ. ಮೊಮ್ಮಗ ಅರ್ಜುನ್ ಹುಟ್ಟುಹಬ್ಬಕ್ಕೆ ತಾತ ಪ್ರೀತಿಯ ಕಾಣಿಕೆ ನೀಡಿದಾಗ ಅವನ ಸಂತೋಷ ಕಂಡು
ಹಾಗು ನನ್ನ ತಾತ 50ವರ್ಷದ ಹಿಂದೆ ನನ್ನ ಹುಟ್ಟುಹಬ್ಬಕ್ಕೆ ನೀಡುತ್ತಿದ್ದ 5ಪೈಸೆ ನೆನೆದು ಭಾವುಕನಾದೆ.

ಅಂದು ನನ್ನ ತಾತ ನನಗೆ ಹೇಳಿ ಹರಸಿದ ಬೀಜಮಂತ್ರ ಕಂದ ವಂಶಕ್ಕೆ ನೆನೆಪಿಡುವಂತ ಧಾತನಾಗು ಈಶನಾಗು ಎಂದು. ದೇವರ ದಯೆಯಿಂದ ತಾತ ಅಪ್ಪ ಅಮ್ಮನ ಆಸೆಯಂತೆ ಆಗಿದ್ದೇನೆ..

ಇಂದು ನಾನು ನನ್ನ ಮೊಮ್ಮಗನಿಗೆ ಗುಣವಿರುವ ವಿದ್ಯಾವಂತನಾಗು,ಎಲ್ಲದರಲ್ಲು ದೇವರಕಾಣು,ದೇವರು ಮೆಚ್ಚುವಂತೆ ಬಾಳು ಎಂದು ಹರಸಿದೆ. ಮಕ್ಕಳಿರುವ ಮನೆಯೇ ಮಂತ್ರಾಲಯ.God bless arjun ಎಂದು ಜಗ್ಗೇಶ್ ವಿಶ್ ಮಾಡಿದ್ದಾರೆ..

About The Author