News: ಭಾರತೀಯ ಆಭರಣ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ದಿನನಿತ್ಯ ಆರ್ಥಿಕ ಸೂಚಕವಾಗಿ ಮಹತ್ವ ಪಡೆದುಕೊಂಡಿದ್ದು, ಜಾಗತಿಕ ಮಾರುಕಟ್ಟೆಯ ಚಲನೆಗಳಿಗೆ ಅನುಗುಣವಾಗಿ ಇವುಗಳಲ್ಲಿ ಏರಿಳಿತಗಳು ಕಂಡುಬರುತ್ತವೆ. ಆದರೆ ಇಂದು ಮಂಗಳವಾರ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಯಾವುದೇ ಪ್ರಮುಖ ಬದಲಾವಣೆ ಕಂಡುಬಂದಿಲ್ಲ ವಿದೇಶಿ ಮಾರುಕಟ್ಟೆಗಳಲ್ಲಿ ದರ ಇಳಿಕೆ ಕಂಡಿದ್ದರೂ, ಭಾರತದಲ್ಲಿ ಬೆಲೆಗಳು ಯಥಾಸ್ಥಿತಿಯಲ್ಲಿ ಮುಂದುವರಿದಿವೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಇಂದಿನ ಚಿನ್ನದ ಬೆಲೆ ನೋಡಿದಾದ್ರೆ, 24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ₹15,622 ಆಗಿದ್ದು, 22 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ₹14,320 ಆಗಿದೆ. ಇದೇ ವೇಳೆ 18 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ₹11,717 ಅಗಿದೆ. ಬೆಳ್ಳಿ ಬೆಲೆಯೂ ಸ್ಥಿರವಾಗಿದ್ದು, 1 ಗ್ರಾಂಗೆ ₹280 ಇದ್ದು, ಬೆಂಗಳೂರಿನಲ್ಲಿ ಸಹ ಇದೇ ದರ ಮುಂದುವರಿದಿದೆ. ಕೆಲವು ನಗರಗಳಲ್ಲಿ, ವಿಶೇಷವಾಗಿ ಚೆನ್ನೈ ಸೇರಿದಂತೆ ಕೆಲ ಭಾಗಗಳಲ್ಲಿ ಬೆಳ್ಳಿ ದರ 1 ಗ್ರಾಂಗೆ ₹290ರಷ್ಟು ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರು ಸೇರಿದಂತೆ ಮುಂಬೈ, ಕೋಲ್ಕತಾ, ಕೇರಳ ಮತ್ತು ಭುವನೇಶ್ವರ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ₹14,320 ಇದೆ. ದೆಹಲಿ, ಜೈಪುರ್ ಮತ್ತು ಲಕ್ನೋದಲ್ಲಿ ₹14,335ರಷ್ಟು ಸ್ವಲ್ಪ ಹೆಚ್ಚಾಗಿರುವುದು ಕಂಡುಬಂದಿದೆ. ಅಹ್ಮದಾಬಾದ್ನಲ್ಲಿ ₹14,325 ಹಾಗೂ ಚೆನ್ನೈನಲ್ಲಿ ₹14,500 ದಾಖಲಾಗಿದೆ ಎಂದು ಮಾರುಕಟ್ಟೆ ಮಾಹಿತಿ ತಿಳಿಸಿದೆ.
ಒಟ್ಟಿನಲ್ಲಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿಕೆ ಕಂಡಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸ್ಥಿರವಾಗಿದ್ದು, ಮುಂದಿನ ದಿನಗಳಲ್ಲಿ ಜಾಗತಿಕ ಪರಿಸ್ಥಿತಿಗಳ ಆಧಾರದ ಮೇಲೆ ಬದಲಾವಣೆ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.




