Recipe: ವೆಜ್ ಥಾಯ್ ಕರ್ರಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಮಸಾಲೆ ತಯಾರಿಸಲು 1 ಸ್ಪೂನ್ ಧನಿಯಾ ಕಾಳು, 1 ಸ್ಪೂನ್ ಜೀರಿಗೆ, 1 ಸ್ಪೂನ್ ಬಿಳಿ ಪೆಪ್ಪರ್ ಕಾಳು, ಸಣ್ಣ ತುಂಡು ಅರಶಿನ, ಸಣ್ಣ ತುಂಡು ಜಿಂಜರ್, 5ರಿಂದ 10 ಬೆಳ್ಳುಳ್ಳಿ ಎಸಳು, 2 ಲೆಮನ್ ಗ್ರಾಸ್ ತುಂಡು, 3ರಿಂದ 4 ಚಿಕ್ಕ ಚಿಕ್ಕ ಈರುಳ್ಳಿ, 5ರಿಂದ 6 ಹಸಿಮೆಣಸು, ಕಾಯಿ ನಿಂಬೆಯ ಸಿಪ್ಪೆ, ಫ್ರೆಶ್ ಕೊತ್ತೊಂಬರಿ ಸೊಪ್ಪಿನ ದಂಟು, ಉಪ್ಪು.

1 ಲೀ. ಕಾಯಿಹಾಲು, ಅರ್ಧ ಕಪ್ ಬೇಬಿಕಾರ್ನ್, ಸ್ವಲ್ಪ ಪನೀರ್, ರೆಡ್-ಎಲ್ಲೋ ಬೆಲ್ ಪೆಪ್ಪರ್, ಜುಕಿನಿ, ಬ್ರೋಕಲಿ, ಕ್ಯಾಪ್ಸಿಕಂ, ಕ್ಯಾರೇಟ್.

ಮಾಡುವ ವಿಧಾನ: ಧನಿಯಾ, ಜೀರಿಗೆ, ಪೆಪ್ಪರ್‌ನ್ನು ತರಿ ತರಿಯಾಗಿ ಪುಡಿ ಮಾಡಿ. ಬಳಿಕ ಇದಕ್ಕೆ, ಅರಶಿನ, ಜಿಂಜರ್, ಬೆಳ್ಳುಳ್ಳಿ ಎಸಳು, ಲೆಮನ್ ಗ್ರಾಸ್ ತುಂಡು, ಈರುಳ್ಳಿ, ಹಸಿಮೆಣಸು, ಕಾಯಿ ನಿಂಬೆಯ ಸಿಪ್ಪೆ, ಫ್ರೆಶ್ ಕೊತ್ತೊಂಬರಿ ಸೊಪ್ಪಿನ ದಂಟು, ಉಪ್ಪು ಹಾಕಿ ಪುಡಿ ಮಾಡಿ. ಇದನ್ನೆಲ್ಲ ಕುಟ್ಟಿ ಕುಟ್ಟಿಯೇ ಪುಡಿ ಮಾಡಬೇಕು. ಈ ಕರ್ರಿಗೆ ಬೇಕಾದ ಮಸಾಲೆ ರೆಡಿ.

ಈಗ ಪ್ಯಾನ್ ಬಿಸಿ ಮಾಡಿ, 200 ಎಂಎಲ್‌ ಕಾಯಿಹಾಲು ಹಾಕಿ ಸ್ವಲ್ಪ ಥಿಕ್ ಆಗುವವರೆಗೂ ಅದನ್ನು ಕೈಯಾಡಿಸುತ್ತಾ ಬಿಸಿ ಮಾಡಿ. ಬಳಿಕ ಇದಕ್ಕೆ 4 ಸ್ಪೂನ್ ನಾವು ಈಗಾಗಲೇ ರೆಡಿ ಮಾಡಿದ ಮಸಾಲೆ ಹಾಕಿ ಮಿಕ್ಸ್ ಮಾಡಿ.

ಕಾಯಿ ಹಾಲು ಎಣ್ಣೆ ಬಿಡುವವರೆಗೂ ಈ ಮಿಶ್ರಣವನ್ನ ಬೇಯಿಸಬೇಕು. ಹಾಗೆ ಬೇಯಿಸುವಾಗ, ಬಿಡದೇ ಅದನ್ನು ಮಿಕ್ಸ್ ಮಾಡಬೇಕು. ಹೀಗೆ ಮಾಡಿದಾಗ ಮಿಶ್ರಣ ಗಟ್ಟಿಯಾಗುತ್ತದೆ. ಬಳಿಕ ಉಳಿದ ಕಾಯಿ ಹಾಲು ಸೇರಿಸಿ.

ನಂತರ ಬೇಬಿ ಕಾರ್ನ್ ಹಾಕಿ ಬೇಯಿಸಿ. ನಂತರ ಉಳಿದ ವೆಜಿಟೇಬಲ್ ಹಾಕಿ ಬೇಯಿಸಿ. ಆದರೆ ಈ ಎಲ್ಲ ತರಕಾರಿಗಳು ಸ್ವಲ್ಪ ಕ್ರಂಚಿಯಾಗಿರಬೇಕು. ಪೂರ್ತಿ ಬೇಯಬಾರದು. ಬಳಿಕ ನಿಂಬೆ ಎಲೆ, ಥಾಯ್ ಬೇಸಿಲ್ ಹಾಕಿ ಮಿಕ್ಸ್ ಮಾಡಿದ್ರೆ ಥಾಯ್ ವೆಜ್ ಕರ್ರಿ ರೆಡಿ.

About The Author