Haveri News: ಹಾವೇರಿ: ಹಾವೇರಿಯಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ್, ವಿವಿಧ ಬೇಡಿಗಳನ್ನು ಆಗ್ರಹಿಸಿ ಇದೆ ದಿನಾಂಕ 10 ರಂದು ಹಾವೇರಿ ಸಿದ್ದಪ್ಪ ಸರ್ಕಲ್ ಬಳಿ ರೈತ ಸಂಘದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ರೈತರಿಂದ ಪ್ರತಿಭಟನೆ ಹೆಸ್ಕಾಂ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಯ ಅಧಿಕಾರಿಗಳಿಗೆ ರೈತರು ತರಾಟೆ ತೆಗೆದುಕ“ಂಡಿದ್ದು, ವಿದ್ಯುತ್ ಇಲಾಖೆಯನ್ನು ಖಾಸಗಿಕರಣ ಮಾಡುವುದರಿಂದ ರೈತರಿಗೆ ಬಹು ದೊಡ್ಡ ಸಮಸ್ಯೆ ಆಗುತ್ತೆ ಕೂಡಲೇ ಈ ಖಾಸಗಿಕರಣ ಮಾಡುವ ವಿಚಾರವನ್ನು ಕೇಂದ್ರ ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ತಾಲೂಕಿನ ತೋಟಗಾರಿಕೆ ಇಲಾಖೆ ಅಧಿಕಾರಿ ಕೃಷಿಗೆ ಸಂಬಂಧಪಟ್ಟಂತಹ ಮಾಹಿತಿ ಕೇಳಿದರೆ ನಿರ್ಲಕ್ಷಿಸುತ್ತಿದ್ದು ಇವರ ವಿರುದ್ಧ ಸಂಬಂಧಪಟ್ಟಂತಹ ಉನ್ನತಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ರೈತ ಸಂಘ ಆಗ್ರಹಿಸಿದೆ. ಅಲ್ಲದೇ, ಸರ್ಕಾರ ಕೃಷಿಯ ವಲವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾ ಬರುತ್ತಿರುವುದು ಬಹಳ ಖಂಡನೆಯ 10 ದಿನ ಒಳಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಪಟ್ಟಣದ ತಹಶೀಲ್ದಾರ್ ಅವರಿಗೆ ರೈತ ಸಂಘದಿಂದ ಮನವಿ ಸಲ್ಲಿಸಲಾಗಿದೆ.




