Horoscope: ಈ 5 ರಾಶಿಯವರು ಅಡುಗೆ ಮಾಡುವುದರಲ್ಲಿ ನಿಸ್ಸೀಮರು

Horoscope: ಇಂದು ನಾವು ಯಾವ 5 ರಾಶಿಯವರಿಗೆ ಅಡುಗೆ ಮಾಡಿ, ಉಣ ಬಡಿಸಲು ಬಲು ಇಷ್ಟ ಅಂತಾ ಹೇಳಲಿದ್ದೇವೆ.

ವೃಷಭ: ವೃಷಭ ರಾಶಿಯವರಿಗೆ ಅಡುಗೆ ಮಾಡುವುದೆಂದರೆ ಬಲು ಇಷ್ಟ. ಆದರೆ ಇವರು ಮಾಡರ್ನ್‌ ಅಡುಗೆಗಿಂತ ಹೆಚ್ಚಾಗಿ ಸಾಂಪ್ರದಾಯಿಕ ಅಡುಗೆಯನ್ನು ಬಲು ರುಚಿಯಾಗಿ ತಯಾರಿಸುತ್ತಾರೆ. ಅದರಲ್ಲೂ ಸಿಹಿ ತಿಂಡಿ ತಯಾರಿಸುವುದರಲ್ಲಿ ಇವರು ನಿಸ್ಸೀಮರು.

ಕರ್ಕ: ಕರ್ಕ ರಾಶಿಯವರು ತಮ್ಮ ಪ್ರೀತಿ ಪಾತ್ರರನ್ನು ಗೆಲ್ಲುವು ಆಹಾರದ ಮೂಲಕ ಎಂಬ ಸತ್ಯವನ್ನು ಅರಿತಿರುತ್ತಾರೆ. ಹಾಗಾಗಿ ಪ್ರೀತಿಯಿಂದ ಅಡುಗೆ ಮಾಡಿ ಬಡಿಸುವ ಮನಸ್ಸು ಇವರದ್ದಾಗಿರುತ್ತದೆ.

ಸಿಂಹ: ಸಿಂಹ ರಾಶಿಯವರು ಕೂಡ ಅಡುಗೆ ಮಾಡುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಆಹಾರ ಪ್ರಿಯರಾಗಿರುವ ಸಿಂಹ ರಾಶಿಯವರು, ತಮಗೆ ಇಷ್ಟವಾಗುವಂತೆ ಅಲ್ಲದೇ, ಇತರರಿಗೂ ಮೆಚ್ಚುಗೆಯಾಗುವಂಥ ಅಡುಗೆ ತಯಾರಿಸುತ್ತಾರೆ.

ಕನ್ಯಾ: ಕನ್ಯಾ ರಾಶಿಯವರು ಯಾವುದೇ ಕೆಲಸ ಮಾಡಿದ್ರೂ, ಅದರಲ್ಲಿ ಸಕ್ಸಸ್ ಕಾಣಲೇಬೇಕು ಎಂದು ಎಲ್ಲ ಶ್ರಮ ಹಾಕಿ ಕೆಲಸ ಮಾಡುತ್ತಾರೆ. ಅದೇ ರೀತಿ ಅಡುಗೆ ಕಲೆ ಕೂಡ ತುಂಬಾ ಚೆನ್ನಾಗಿ ಕಲಿತಿರುತ್ತಾರೆ.

ತುಲಾ: ತುಲಾ ರಾಶಿಯವರು ಶಿಸ್ತಿನ ಸಿಪಾಯಿಗಳು. ಚಂದವಾಗಿ, ಸರಳವಾಗಿ ರೆಡಿಯಾಗೋದು, ಕ್ಲೀನ್ ಆಗಿರೋದು ಅಂದ್ರೆ ಇವರಿಗೆ ಅಚ್ಚುಮೆಚ್ಚು. ಅದೇ ರೀತಿ ಇವರು ಅಡುಗೆ ಮಾಡುವುದರಲ್ಲೂ ನಿಸ್ಸೀಮರು. ರುಚಿಯಾಗಿ ಅಡುಗೆ ಮಾಡುವ ತುಲಾ ರಾಶಿಯವರು, ಕೇಟರಿಂಗ್ ಬ್ಯುಸಿನೆಸ್ ಮಾಡಿದ್ರೂ ಸಕ್ಸಸ್ ಆಗ್ತಾರೆ.

About The Author