Spiritual: ಕೆಲವರು ಬಾಚಿಯಾದ ಬಳಿಕ, ಉದುರಿದ ಕೂದಲನ್ನು ಸುತ್ತಿ ಕೂಡಿಡುತ್ತಾರೆ. ಮತ್ತು ಕೂದಲು ಕೇಳಿ ಬರುವವರಿಗೆ ತಮ್ಮ ಕೂದಲನ್ನು ಹಣಕ್ಕೆ ಮಾರುತ್ತಾರೆ. ಅಥವಾ ಕೂದೆಲ್ಲಲ ನೀಡಿ, ಪಾತ್ರೆ ಖರೀದಿಸುತ್ತಾರೆ. ಆದರೆ ನಾವೆಂದೂ ಕೂದಲನ್ನು ಮಾರಬಾರದಂತೆ.. ಯಾಕೆ ಎಂದು ತಿಳಿಯೋಣ ಬನ್ನಿ..
ಕೂದಲನ್ನು ಏಕೆ ಮಾರಬಾರದು ಎಂದರೆ ಕೂದಲು ಬಳಸಿ ಮಾಂತ್ರಿಕ, ತಾಂತ್ರಿಕ ಕೆಲಸಗಳನ್ನು ಮಾಡಲಾಗುತ್ತದೆ. ಇದರಿಂದ ಓರ್ವ ಮಹಿಳೆಯನ್ನು ಆರಾಮವಾಗಿ ವಶೀಕರಣ ಮಾಡಬಹುದು. ಅಲ್ಲದೇ ಬೇರೆಯವರ ಕೂದಲು ಬಳಸಿ, ತಮ್ಮ ಶಕ್ತಿ ಹೆಚ್ಚಿಸಿಕ“ಳ್ಳಲು ಕೂಡ ಕೂದಲು ಖರೀದಿಸುವವರಿದ್ದಾರೆ.
ಕೂದಲು ಮಾರುವುದರಿಂದ ಚಂದ್ರ ಮತ್ತು ಶುಕ್ರನ ಸ್ಥಾನ ದುರ್ಬಲವಾಗುತ್ತದೆ. ಅವೆರಡು ದುರ್ಬಲವಾಗಬಾರದು ಎಂದರೆ, ನಿಮ್ಮ ಸೌಂದರ್ಯ ಸರಿಯಾಗಿರಬೇಕು ಎಂದರೆ ನೀವು ಕೂದಲು ಮಾರಬಾರದು.
ಅಲ್ಲದೇ, ನಿಮ್ಮ ಕೂದಲನ್ನು ಮಾಂತ್ರಿಕ ಕೆಲಸಕ್ಕೆ ಬಳಸಿದ್ದೇ ಆದಲ್ಲಿ, ಜೀವನದಲ್ಲಿ ಸುಧಾರಿಸಲಾಗದ ಆರೋಗ್ಯ ಸಮಸ್ಯೆಗೆ ನೀವು ಗುರಿಯಾಗಬೇಕಾಗುತ್ತದೆ. ಹಾಗಾಗಿ ಕೂದಲು ಮಾರುವ ಮುನ್ನ ಎಚ್ಚರಿಕೆ ವಹಿಸಿ.




