Sandalwood News: ಯಾವಾಗಲೂ ಏನಾದರೂ ಡಿಫ್ರೆಂಟ್ ಆಗಿ ಮಾಡಬೇಕು ಅನ್ನೋ ತವಕದಲ್ಲಿರುವ ನಟ, ಡಾನ್ಸರ್ ಕಿಶನ್ ಈ ಬಾರಿ ನಟಿ ನಿವೇದಿತಾ ಜತೆ ಸೇರಿ, ನವಿಲುಗರಿ ಧರಿಸಿ, ಹೇ ನವಿಲೆ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ವೀಡಿಯೋ ಸಖತ್ ವೈರಲ್ ಆಗಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ನವಿಲುಗರಿ ಬಳಸಿದ್ದಕ್ಕೆ ಇವರಿಬ್ಬರ ವಿರುದ್ಧ ದೂರು ದಾಖಲಾಗಿದೆ.
ಈ ಬಗ್ಗೆ ನಟಿ ನಿವೇದಿತಾ ಗೌಡ ನವಿಲುಗರಿ ಹಾಕಿ ನೃತ್ಯ ಮಾಡಿದ್ದಕ್ಕೆ ಇದೀಗ ಕ್ಷಮೆಯೂ ಕೇಳಿದ್ದಾರೆ. ನಾವು ನವಿಲುಗರಿ ಧರಿಸಿ ಡಾನ್ಸ್ ಮಾಡಿದ್ದೆವು. ಅದು ತುಂಬಾ ವೈರಲ್ ಆಗಿತ್ತು. ಆದರೆ ಇದು ತಪ್ಪು ಅಂತಾ ನಮಗೆ ತಿಳಿದಿರಲಿಲ್ಲ. ಇದು ಕೋಲ್ಯಾಬರೇಶನ್ ಆಗಿದ್ದು. ಆದರೆ ಈಗ ಆ ತಪ್ಪಿನ ಬಗ್ಗೆ ಅರಿವಾಗಿದೆ.
ನವಿಲು ನಮ್ಮ ರಾಷ್ಟ್ರೀಯ ಪಕ್ಷಿ. ಹಾಗಾಗಿ ಇದರ ಗರಿ ಬಳಸುವುದು, ನಮ್ಮ ಮನೆಯಲ್ಲಿ ಇರಿಸುವುದು ಕೂಡ ತಪ್ಪು ಎಂದು ಹೇಳಲಾಗಿದೆ. ಈ ತಪ್ಪಿಗಾಗಿ ನಾನು ಕ್ಷಮೆಯಾಚಿಸುತ್ತೇನೆ. ನೀವು ಕೂಡ ಇಂಥ ತಪ್ಪು ಮಾಡಬೇಡಿ. ಇದು ಅಪರಾಧ. ಥ್ಯಾಂಕ್ಯೂ ಎಂದು ನಿವೇದಿತಾ ಈ ಬಗ್ಗೆ ಕ್ಷಮೆಾಚಿಸಿದ್ದಾರೆ.




