Chhattisgarh News: ನಿಲ್ಲಲೂ ಆಗದಂತೆ ಕುಡಿದು ಬಂದ ವರ: ಮದುವೆ ಕ್ಯಾನ್ಸಲ್ ಮಾಡಿದ ವಧು

Chhattisgarh News: ಛತ್ತೀಸ್‌ಘಡದಲ್ಲಿ 1 ಘಟನೆ ನಡೆದಿದ್ದು, ಮದುವೆ ದಿನ ಮಧುಮಗ ಕುಡಿದು ಬಂದಿದ್ದು, ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ. ಮತ್ತು ಆಕೆಯ ಈ ನಿರ್ಧಾರಕ್ಕೆ ಆಕೆಗೆ ಸನ್ಮಾನವನ್ನೂ ಮಾಡಲಾಗಿದೆ.

ಚಂಪಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಮುಸ್ಕಾನ್ ಪ್ರಧಾನ್ ಜತೆ 24 ವರ್ಷದ ಶರತ್ ರಾಮ್ ವಿವಾಹ ನಿಗದಿಯಾಗಿತ್ತು. ಸಂಜೆ 4 ಗಂಟೆಗೆ ವಧುವಿನ ಮನೆ ಬಳಿ ದಿಬ್ಬಣ ಬಂದಾಗ, ವರ ಶರತ್ ನಿಲ್ಲಲೂ ಆಗದಷ್ಟು ಕುಡಿದು ಬಂದಿದ್ದ. ಹೀಗಾಗಿ ವಧು ಮುಸ್ಕಾನ್ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ.

ಈ ಮುನ್ನ ಶರತ್ ನಿಶ್ಚಿತಾರ್ಥಕ್ಕೂ ಕುಡಿದು ಬಂದಿದ್ದನಂತೆ. ಆಗ ಮುಸ್ಕಾನ್ ಆತನಿಗೆ ಇನ್ನು ಮುಂದೆ ಕುಡಿದರೆ, ಮದುವೆ ಕ್ಯಾನ್ಸಲ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಳು. ಆಗ ಇನ್ನು ಮುಂದೆ ಕುಡಿಯುವುದನ್ನೇ ಬಿಡುತ್ತೇನೆ ಎಂದು ಶರತ್ ಹೇಳಿದ್ದನಂತೆ. ಆದರೆ, ಮದುವೆ ದಿನವೇ ನಿಲ್ಲಲು ಸಾಧ್ಯವಾಗದಂತೆ ಕುಡಿದು ಬಂದಿದ್ದರಿಂದ ಮುಸ್ಕಾನ್ ಮದುವೆ ಕ್ಯಾನ್ಸಲ್ ಮಾಡಿ ಅತ್ಯುತ್ತಮ ನಿರ್ಧಾರ ಮಾಡಿದ್ದಾಳೆ.

ಬಳಿಕ ಎರಡೂ ಕುಟುಂಬಗಳ ಮಧ್ಯೆ ಜಗಳವಾಗಿ, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಸ್ಥಳಕ್ಕೆ ಧಾವಿಸಿದ್ದ ಪೋಲೀಸರು ಗಲಾಟೆ ನಿಲ್ಲಿಸಿದ್ದಾರೆ. ಇನ್ನು ಮುಸ್ಕಾನ್ ಮಾಡಿದ ಈ ನಿರ್ಧಾರಕ್ಕೆ ಆಕೆಗೆ ಸ್ಥಳೀಯ ಪೋಲೀಸರು ಸನ್ಮಾನವೂ ಮಾಡಿದ್ದಾರೆ.

About The Author