Life Lesson: ಈ 6 ವಿಷಯದ ಬಗ್ಗೆ ಯಾರಲ್ಲಿಯೂ ಹೇಳಬೇಡಿ: ಹೇಳಿದರೆ ನಿಮ್ಮ ಯಶಸ್ಸು ಅಂತ್ಯ..

Life Lesson: ಕೆಲ ವಿಷಯಗಳು ನಮ್ಮಲ್ಲೇ ಇದ್ದರೆ ಉತ್ತಮ. ಆ ವಿಷಯದ ಬಗ್ಗೆ ಇತರರಿಗೆ ತಿಳಿದರೆ, ಅದು ನಿಮ್ಮ ಯಶಸ್ಸನ್ನು ಅಂತ್ಯವಾಗಿಸಬಹುದು. ಹಾಗಾಗಿ ಕೆಲ ವಿಷಯಗಳನ್ನು ಯಾರಿಗೂ ಹೇಳಬೇಡಿ.  ಆ ವಿಷಯಗಳು ಯಾವುದು ಅಂತಾ ತಿಳಿಯೋಣ ಬನ್ನಿ..

ಬ್ಯಾಾಂಕ್ ಬ್ಯಾಲೆನ್ಸ್: ನಿಮ್ಮ ಬಳಿ ಹೆಚ್ಚು ಹಣವಿರಲಿ, ಕಡಿಮೆ ಹಣವಿರಲಿ. ಅದನ್ನು ಯಾರಲ್ಲಿಯೂ ಹೇಳಬೇಡಿ. ಏಕೆಂದರೆ ಹಣ ಹೆಚ್ಚಿದ್ದರೂ, ಕಡಿಮೆ ಇದ್ದರೂ ಜನ ಯಾವುದಾದರೂ ರೀತಿಯಲ್ಲಿ ನಿಮ್ಮನ್ನು ಗೇಲಿ ಮಾಡುತ್ತಾರೆ. ಅದನ್ನು ಇರುವ ಹಣವನ್ನು ಕರಗಿಸಲು ನೋಡುತ್ತಾರೆ. ಹಾಾಗಾಗಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಎಂದು ಯಾರಿಗೂ ಹೇಳಬೇಡಿ.

ಫ್ಯೂಚರ್ ಪ್ಲಾನ್ಸ್: ಭವಿಷ್ಯದಲ್ಲಿ ನೀವೇನಾದರೂ ಮುಖ್ಯವಾಗಿರುವ ಕೆಲಸ ಮಾಡುವುದಿದ್ದಲ್ಲಿ, ಅದರ ಬಗ್ಗೆ ಯಾರಲ್ಲಿಯೂ ಹೇಳಬೇಡಿ. ಕಾರ್ ಖರೀದಿ, ಮನೆ ಖರೀದಿ, ಅಥವಾ ಬ್ಯುಸಿನೆಸ್ ಮಾಡುವುದು. ಹೀಗೆ ಏನೇ ಪ್ಲಾನ್ ಇದ್ದರೂ ನಿಮ್ಮಲ್ಲೇ ಇರಲಿ.

ಮನೆ ಸಮಸ್ಯೆ ಎಲ್ಲರ ಬಳಿ ಹೇಳಬೇಡಿ: ನಿಮ್ಮ ಮನೆಯಲ್ಲಿ ಜಗಳವಾಗಿರಬಹುದು. ಅಥವಾ ಪತಿ-ಪತ್ನಿ ಮಧ್ಯೆ ಕಲಹವಿರಬಹುದು. ಏನೇ  ಸಮಸ್ಯೆ ಇದ್ದರೂ ಅದನ್ನು ನೀವೇ ಬಗೆಹರಿಸಿಕ“ಳ್ಳಿ. ವಿನಃ ಅದನ್ನು ಬೇರೆಯವರಿಗೆ ಹೇಳಬೇಡಿ. ಏಕೆಂದರೆ, ನಿಮ್ಮ ಸಮಸ್ಯೆ ಕೇಳಿದವರು, ನಿಮ್ಮ ಮೇಲೆ ಅನುಕಂಪವಿರುವ ರೀತಿ ನಟಿಸಿದರೂ, ಅವರು ನಿಮ್ಮ ಸಮಸ್ಯೆ ಕೇಳಿ ಮನಸ್ಸಿನಲ್ಲೇ ಖುಷಿ ಪಡುವಂಥವಾಗಿರಬಹುದು.

ನಿಮ್ಮ ವೀಕ್‌ನೆಸ್: ನಿಮಗೆ ಯಾವುದಾದರೂ ವಿಷಯದಲ್ಲಿ ವೀಕ್‌ನೆಸ್ ಇದ್ದಲ್ಲಿ, ಆ ಬಗ್ಗೆ ಯಾಾರ ಬಳಿಯೂ ಹೇಳಬೇಡಿ. ಮನೆಮಂದಿ ಬಳಿಯೂ ಕೂಡ, ಅದಕ್ಕೆ ಬೇಕಾದ ಪರಿಹಾರವನ್ನು ಸರಿಯಾದ ವ್ಯಕ್ತಿ, ವೈದ್ಯರು ಬಳಿ ಹೋಗಿ ಬಗೆಹರಿಸಿ. ಏಕೆಂದರೆ, ಜನ ನಿಮ್ಮ ವೀಕ್‌ನೆಸ್ ತಿಳಿದು ನಿಮ್ಮಿಂದ ಲಾಭ ಪಡೆಯಲು ಯತ್ನಿಸಬಹುದು.

ಹಣದ ಸಮಸ್ಯೆ: ನೀವು ಯಾರ ಬಳಿಯಾದರೂ ಸಾಲ ಮಾಡಿರಬಹುದು. ಅಥವಾ ಬ್ಯಾಂಕ್ ಸಾಲವೇ ಇರಬಹುದು. ಆ ಸಾಲ ತೀರಿಸಲು ನಿಮಗೆ ಸಾಧ್ಯವಾಾಗದೇ ಇರಬಹುದು. ಅಂಥ ಸಮಯದಲ್ಲಿ ನೀವು ಧೈರ್ಯಗೆಡದೇ, ನಿಮ್ಮ ಸಾಮರ್ಥ್ಯ ಉಪಯೋಗಿಸಿ, ಕೆಲಸ ಮಾಡಿ, ಹಣ ಗಳಿಸಿ, ನಿಮ್ಮ ಸಮಸ್ಯೆಯುನ್ನು ನೀವೇ ಬಗೆಹರಿಸಬೇಕು. ನಿಮ್ಮ ಹಣದ ಸಮಸ್ಯೆ ಬಗ್ಗೆ ಇತರರಿಗೆ ಹೇಳಿದರೆ, ಅವರು ಅದರಿಂದಲೇ ನಿಮ್ಮ ತಮಾಷೆ ಮಾಡಿ, ನಿಮ್ಮನ್ನು ಅವಮಾನಿಸಬಹುದು. ಅಲ್ಲದೇ, ಹಣದ ಸಮಸ್ಯೆ ಇತರರ ಬಳಿ ಹೇಳಿದಾಗ, ಅದರಿಂದ ನಿಮ್ಮ ಬೆಲೆ ಕಡಿಮೆಯಾಗುತ್ತದೆ.

ಸಿಕ್ರೇಟ್: ನಿಮ್ಮ ಜೀವನದಲ್ಲಿ ಏನಾದರೂ ಸಿಕ್ರೇಟ್ ಇರಬಹುದು. ಆ ಸಿಕ್ರೇಟ್ ಯಾರಲ್ಲಿಯೂ ಹೇಳಬೇಡಿ. ಅವರು ನಿಮ್ಮವರೇ ಆಗಿರಬಹುದು, ಬೇರೆಯವರೇ ಆಗಿರಬಹುದು. ಯಾರ ಬಳಿಯೂ ನಿಮ್ಮ ಸಿಕ್ರೇಟ್ ಹೇಳಬೇಡಿ. ಬೇರೆಯವರಾದರೂ ನಿಮ್ಮ ಸಿಕ್ರೇಟ್ ಕೇಳಿ, ಅಲ್ಲೇ ಬಿಟ್ಟು ಮುನ್ನಡೆಯಬಹುದು. ಆದರೆ ನಿಮ್ಮವರು ಕೆಲವು ಬಾರಿ ನಿಮಗೆ ಶತ್ರುಗಳಾಗುತ್ತಾರೆ.

About The Author